ನೇತ್ರದ ಸಮಸ್ಯೆಗಳಿಗೆ ಪರಿಹಾರ

ನೇತ್ರದ ಸಮಸ್ಯೆಗಳಿಗೆ ಪರಿಹಾರ

ಬೆಂಗಳೂರು, ಅ.20 : ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್, ಮೊಬೈಲ್ ಬಳಕೆಯಿಂದ ಕಣ್ಣುಗಳು ಹೆಚ್ಚು ಆಯಾಸಗೊಳ್ಳುತ್ತವೆ. ಕಣ್ಣಿನ ಅತಿಯಾದ ಶ್ರಮ ಒಂದಲ್ಲ ಒಂದು ವಿಧದಲ್ಲಿ ದೇಹಕ್ಕೆ ಅಹಿತಕರ. ನಮ್ಮ ದೇಹದ ಸೂಕ್ಷ್ಮ ಅಂಗಳಳಲ್ಲೊಂದು ಕಣ್ಣುಗಳು.
ಸಾಮಾನ್ಯವಾಗಿ ಕಣ್ಣುಗಳಿಗೆ ನೀಡುವ ಅತಿಯಾದ ಶ್ರಮದಿಂದ ಕಣ್ಣು ಕೆಂಪಗಾಗುವುದು, ಕಣ್ಣುಗಳಲ್ಲಿ ಉರಿ, ಎದುರಿನ ವಸ್ತುಗಳನ್ನು ಸ್ಪಷ್ಟವಾಗಿ ನೋಡಲಸಾಧ್ಯವಾಗುವುದು, ಹಗಲಿನ ಬೆಳಕನ್ನು ನೋಡಲಾಗದ ಸಮಸ್ಯೆಗಳು ಎದುರಾಗಬಹುದು.
ಅದರಲ್ಲೂ ಸತತವಾಗಿ ಕಣ್ಣುಗಳಿಗೆ ಕೆಲಸ ನೀಡುವುದರಿಂದ ನಯನಗಳಲ್ಲಿ ನೀರು ತುಂಬಿರುತ್ತದೆ. ಕಣ್ಣುಗಳು ತೇವಗೊಂಡಿದ್ದರೆ ಸಹ ನಿತ್ಯದ ಕೆಲಸಗಳಿಗೆ ಅಡ್ಡಿಯಾಗುತ್ತದೆ. ಆದರೆ ಆಧುನಿಕ ಜೀವನಶೈಲಿಯಲ್ಲಿ ಕಂಪ್ಯೂಟರ್ ಬಳಕೆ ಅಥವಾ ಮೊಬೈಲ್ಗಳಿಂದ ದೂರವಿರುವುದು ತುಸು ಕಷ್ಟ ಎನ್ನುವವರೇ ಹೆಚ್ಚು. ಆದರೆ ನಿಮ್ಮ ಕಾರ್ಯಕ್ಕೆ ತಕ್ಕಂತೆ ಕೆಲ ಮನೆಮದ್ಧುಗಳನ್ನು ಸೇವಿಸುವ ಮೂಲಕ ನೇತ್ರಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದು ನೆನಪಿರಲಿ. ಅವುಗಳೆಂದರೆ. ಕಣ್ಣು ಉರಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಸೌತೆಕಾಯಿಯ ತಿರುಳನ್ನು ಕಣ್ಣಿಗೆ ಉಜ್ಜಿಕೊಂಡರೆ ಉರಿ ಕಡಿಮೆಯಾಗುತ್ತದೆ.

ಪ್ರತಿ ದಿನ ನೆಲ್ಲಿಕಾಯಿ ಜ್ಯೂಸ್ ಅನ್ನು ಸೇವಿಸುತ್ತಿದ್ದರೆ ಕಣ್ಣಿನ ದೋಷ ದೂರವಾಗುತ್ತದೆ.ಊಟದೊಂದಿಗೆ ಈರುಳ್ಳಿಯನ್ನು ನಂಜಿಕೊಂಡು ತಿನ್ನುವುದರಿಂದ ಸಹ ಕಣ್ಣು ನೋವು ಕಡಿಮೆಯಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos