ಆಂಗ್ಲ ವ್ಯಾಮೋಹಕ್ಕೆ ಕನ್ನಡಿಗರು ಬಲಿ

ಆಂಗ್ಲ ವ್ಯಾಮೋಹಕ್ಕೆ ಕನ್ನಡಿಗರು ಬಲಿ

ಕೊರಟಗೆರೆ: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಆಂಗ್ಲಬಾಷೆಯ ವ್ಯಾಮೋಹಕ್ಕೆ ಸಹನ ಶೀಲರಾದ ಕನ್ನಡಿಗ ಯುವ ಜನತೆ ಬಲಿಯಾಗಿ ಮಾತೃಭಾಷೆಯನ್ನು ಮರೆಯುತ್ತಿದೆ. ಎಂದು ಮಾಜಿ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಪಟ್ಟಣದ ಸರಕಾರಿ ಪದವಿ ಪೂರ್ವಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ೬೫ನೇ ಕನ್ನಡರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ರಂಗಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಗಣ್ಯರನ್ನು ತಾಲೂಕು ಆಡಳಿತದ ಪರವಾಗಿ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡಿದರು.
ಕನ್ನಡ ನಾಡಿನ ಸಂಸ್ಕೃತಿಯೊಂದಿಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿರುವ ಹಾಗೂ ೮ ಜ್ಞಾನ ಪೀಠ ಪ್ರಶಸ್ತಿ ದೊರೆತ ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡಪರ ಸಂಘಟನೆಗಳು ಕನ್ನಡ ರಾಜ್ಯೋತ್ಸವನ್ನು ನಿತ್ಯೋತ್ಸವವಾಗಿ ಮಾಡುವ ಮೂಲಕ ಕನ್ನಡ ಭಾಷೆ ಉಳಿಸಿ ಮುಂದಿನ ಪೀಳಿಗೆಗೆ ಭಾಷೆಯ ಬಗ್ಗೆ ಅಭಿಮಾನ ಬೇಳೆಸುವಂತೆ ಹಾಗೂ ಕನ್ನಡ ಭಾಷಿತರಿರುವ ಹಲವು ಪ್ರದೇಶಗಳು ಗಡಿ ಭಾಗದ ರಾಜ್ಯಗಳಲ್ಲಿ ದ್ದು, ಅವು ಸಹ ಕರ್ನಾಟಕಕ್ಕೆ ವಿಲೀನಗೊಳ್ಳುವಂತೆ ಕರ್ನಾಟಕದಏಕೀಕರಣ ಸಂಪೂರ್ಣವಾದಂತೆ ಹೋರಾಟ ಮಾಡಿದ ಮಹನೀಯರನ್ನು ನೆನೆಯಬೇಕುಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಪ್ರೇಮಾ, ತಾ.ಪಂ.ಅಧ್ಯಕ್ಷ ಟಿ.ಸಿ.ರಾಮಯ್ಯ ಉಪಾಧ್ಯಕ್ಷ ವೆಂಕಟಪ್ಪ, ಸದಸ್ಯೆ ನರಸಮ್ಮ, ಪ.ಪಂ.ಸದಸ್ಯಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ನಾಗರಾಜು, ಸಾಹಿತ್ಯ ಪರಿಷತ್‌ಅದ್ಯಕ್ಷ ಮಲ್ಲಿಕಾರ್ಜುನ್. ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷರಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಮೈಲಾರಪ್ಪ, ತಾ.ಪಂ.ಇಓ ಶಿವಪ್ರಕಾಶ್, ಸಿಪಿಐ. ನದಾಫ್, ಪಿಎಸೈ ಮುತ್ತುರಾಜ್, ಸರಕಾರಿ ನೌಕರರ ಸಂಘದಅಧ್ಯಕ್ಷರುದ್ರೇಶ್, ಬಿಇಓ ಸುಧಾಕರ್, ಕೃಷಿ ಅಧಿಕಾರಿ ನಾಗರಾಜು, ಬೆಸ್ಕಾಂ ಇಇಒ ಮಲ್ಲಣ್ಣ, ಅಕ್ಷರದಾಸೋಹ ಸಹಾಯಕ ನಿರ್ದೇಶಕರಘು ಸೇರಿದಂತೆಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos