ಕನ್ನಡ ರಾಜ್ಯೋತ್ಸವಕ್ಕೆ ತನ್ನದೇ ಆದ ಮಹತ್ವವಿದೆ

ಕನ್ನಡ ರಾಜ್ಯೋತ್ಸವಕ್ಕೆ ತನ್ನದೇ ಆದ ಮಹತ್ವವಿದೆ

 ಮಹದೇವಪುರ, ನ. 01: ಕನ್ನಡದ ಸಾಂಸ್ಕೃತಿಕ, ಭೌಗೋಳಿಕ ಪರಂಪರೆಯನ್ನು ಸ್ಮರಿಸುವ ದಿನವಾಗಿ ಆಚರಿಸುವ ಕನ್ನಡ ರಾಜ್ಯೋತ್ಸವಕ್ಕೆ ತನ್ನದೇ ಆದ ಮಹತ್ವವಿದೆ, ಈ ದಿನವನ್ನು ಐತಿಹಾಸಿಕ ಹಿನ್ನಲೆ ಮೂಲಕ ನೋಡುತ್ತಾ ಹೊರಟಾಗ ಈ ದಿನದ ಮಹತ್ವ ತಿಳಿಯುತ್ತದೆ ಎಂದು ಸಮಾಜ ಸೇವಕ ಅನಂತ ರಾಮಯ್ಯ ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ಮಹದೇವಪುರ ಕ್ಷೇತ್ರದ ಕಾರ್ಮಿಕ ಘಟಕದ ಅಧ್ಯಕ್ಷ ಎಲ್ಲಪ್ಪ ದಭಗೊಂದಿ ನೇತೃತ್ವದಲ್ಲಿ ಏರ್ಪಡಿಸಿದ್ದ 64 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನೂರಾರು ಯುವಕರು ಬಾವುಟಗಳನ್ನು ಹಿಡಿದು ವೈಟ್ ಫೀಲ್ಡ್ ಭಾಗಗಳಲ್ಲಿ ಬೈಕ್ ರ್ಯಾಲಿ ಮಾಡುವ ಮೂಲಕ ಕನ್ನಡದ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ಭಾರತ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ  ಡಾ.ವೆ.ಅಜಿತ್ ಕುಮಾರ್, ಕ.ಸಾ.ಪ ಬೆಂ.ನ.ಜಿ ಉಪಾಧ್ಯಕ್ಷ ಮಂಜುನಾಥ್,

ಕೋಶಾದಿಕಾರಿ ಶಿವರಾಂ, ಉತ್ತರಕರ್ನಾಟಕ ಸಂಘದ ಸದಸ್ಯ ಮನೋಹರ್ ಯಾರಳ್ಳಿ, ಶಾಮಸುಂದರ ಪುರಾಣಿಕ, ಕ್ಷೇತ್ರದ ಉಪಾಧ್ಯಕ್ಷ ಲೋಹಿತ್ ಗೌಡ, ಮುಖಂಡರಾದ ಕೋಡಿಹಳ್ಳಿ ತಿಪ್ಪೇಶ, ಜನಾರ್ದನ್, ಮಧು, ಶಶಿ, ತಿಪ್ಪೇಸ್ವಾಮಿ ಸೇರಿದಂತೆ ಹಲವಾರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos