ಕನ್ನಡದಲ್ಲೂ ಮೂಡಿಬರಲಿದೆ ರಾಘವ ಲಾರೆನ್ಸ್ ನಟನೆಯ ಕಾಂಚನ-3!

ಕನ್ನಡದಲ್ಲೂ ಮೂಡಿಬರಲಿದೆ ರಾಘವ ಲಾರೆನ್ಸ್ ನಟನೆಯ ಕಾಂಚನ-3!

ಬೆಂಗಳೂರು, ಏ. 23, ನ್ಯೂಸ್ ಎಕ್ಸ್ ಪ್ರೆಸ್: ರಾಘವ ಲಾರೆನ್ಸ್ ನಟಿಸಿ ನಿರ್ದೇಶಿಸಿರುವ ಕಾಂಚನ-3 ಹಾರರ್ ಸಿನಿಮಾ ಕಳೆದ ವಾರ ದೇಶಾದ್ಯಂತ ತಮಿಳು-ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್​ ನಲ್ಲಿ 40 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ಹೊಸ ಅಧ್ಯಾಯ ಬರೆದಿದೆ. ಇನ್ನು ಕನ್ನಡದಲ್ಲಿ ಈ ಸಿನಿಮಾವನ್ನು ಕಲ್ಪನಾ ಹೆಸರಿನಲ್ಲಿ ರಿಮೇಕ್ ಮಾಡಲಾಗಿತ್ತು. ಎರಡೂ ಸಿನಿಮಾಗಳಲ್ಲೂ ಉಪೇಂದ್ರ ನಾಯಕನಾಗಿ ನಟಿಸಿದ್ದರು. ಆದರೆ ಇದೀಗ ಕಾಂಚನ-3 ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಈ ಮೂಲಕ ರಾಘವ ಲಾರೆನ್ಸ್ ಕನ್ನಡಕ್ಕೆ ಬರುತ್ತಿದ್ದಾರೆ. ಸಿನಿಮಾ ಪ್ರಮೋಟ್ ಮಾಡಲು ಲಾರೆನ್ಸ್, ನಟಿಯರಾದ ವೇದಿಕಾ, ನಿಕ್ಕಿ ತಂಬೋಳಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ವಿತರಕರಾದ ಜಾಕ್ ಮಂಜು ಹಾಗೂ ಯೋಗಿ ದ್ವಾರಕೀಶ್ ಜಂಟಿಯಾಗಿ ಈ ಸಿನಿಮಾವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡುವ ಹೊಣೆ ಹೊತ್ತಿದ್ದಾರೆ. ಅಶ್ವಿನಿ ಆಡಿಯೋ ಸಂಸ್ಥೆ ಕಾಂಚನ-3 ಚಿತ್ರದ ಧ್ವನಿ ಸುರುಳಿಯನ್ನ ಬಿಡುಗಡೆ ಮಾಡಿತ್ತು. ಕನ್ನಡ ವರ್ಸನ್​​​ಗೆ ಸೆನ್ಸಾರ್ ಬೋರ್ಡ್ ಪ್ರಮಾಣ ಪತ್ರ ನೀಡಿದರೆ ಏಪ್ರಿಲ್ 26 ರಂದು ಬಿಡುಗಡೆಯಾಗಲಿದೆ.

ಫ್ರೆಶ್ ನ್ಯೂಸ್

Latest Posts

Featured Videos