ಕಲ್ಕಿ ಭಗವಾನ್ ಮೇಲೆ ಐಟಿ ದಾಳಿ

ಕಲ್ಕಿ ಭಗವಾನ್ ಮೇಲೆ ಐಟಿ ದಾಳಿ

ಚನ್ನೈ , ಅ.19 : ಕಲ್ಕಿ ಭಗವಾನ್ ಗೆ ಸೇರಿದ ಮನೆ ಕಛೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ. ಪುತ್ರನಿಗೆ ಸೇರಿದ ಆಸ್ತಿಗಳನ್ನು ಹೊಂದಿರುವ ಚೆನ್ನೈ,ಹೈದರಾಬಾದ್, ಬೆಂಗಳೂರು, ಆಂಧ್ರ ಪ್ರದೇಶದ ವರದೈಯಪಲೆಮ್ ನಲ್ಲಿ ತೀವ್ರ ತನಿಖೆ ನಡೆಸಿದಾಗ ಕಲ್ಕಿ ಭಗವಾನ್ ಮನೆ, ಕಚೇರಿ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಬಲೆ ಸಿಕ್ಕಿದ್ದು ಬರೋಬ್ಬರಿ 93 ಕೋಟಿ ಮೌಲ್ಯದ ವಸ್ತು, 500 ಕೋಟಿ ಅಘೋಷಿತ ಆಸ್ತಿ ರೂ.ಅಘೋಷಿತ ಆದಾಯ ಮೂಲಗಳು ಪತ್ತೆಯಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಸ್ವ ಘೋಷಿತ ದೇವಮಾನವ ಕಲ್ಕಿ ಭಗವಾನ್ ಗೆ ಸೇರಿದ ಆಶ್ರಮ, ಶಿಕ್ಷಣ ಸಂಸ್ಥೆ, ಕಚೇರಿ ಹೀಗೆ ಸುಮಾರು 40 ಸ್ಥಳಗಳ ಮೇಲೆ ಕಳೆದ ಬುಧವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವ್ಯಾಪಕವಾಗಿ ಶೋಧ ನಡೆಸಿದ್ದರು. ಈ ಸಂದರ್ಭದಲ್ಲಿ ಸುಮಾರು 93 ಕೋಟಿ ರೂಪಾಯಿ ಬೆಲೆಬಾಳುವ ವಸ್ತುಗಳು ಇಲಾಖೆ ಅಧಿಕಾರಿಗಳಿಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos