ಹಾಲು ಕುಡಿದ ಕಲ್ಲಿನ ದೇವಿ

ಹಾಲು ಕುಡಿದ ಕಲ್ಲಿನ ದೇವಿ

ಬೆಂಗಳೂರು, ಸೆ. 28 : ಗಣೇಶ ವಿಗ್ರಹ ಹಾಲು ಕುಡಿದ ಸುದ್ದಿ, ಬೇವಿನ ಮರದಿಂದ ಹಾಲಿನ ನೊರೆ, ಭಾವಚಿತ್ರದಿಂದ ಕುಂಕುಮ ಹರಿದು ಬರುವುದು ಸೇರಿ ಹಲವು ವಿಸ್ಮಯಕಾರಿ ವಿಷಯಗಳನ್ನು ಕೇಳಿರುವಂತೆ ನಗರದ ಎಚ್ಎಎಲ್ ರಸ್ತೆಯ ಸುಧಾಮನಗರದಲ್ಲಿರುವ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತ ಸಾಗರವೇ ನೆರೆದಿತ್ತು. ಎಲ್ಲರೂ ದೇವಿಗೆ ಹಾಲು ಕುಡಿಸಲು ನಾಮುಂದು ತಾಮುಂದು ಎಂದು ಮುನ್ನುಗ್ಗುತ್ತಿದ್ದರು. ಹೀಗಾಗಿ ಪ್ರತಿಯೊಬ್ಬರ ಕೈಯಲ್ಲೂ ಹಾಲಿನ ಪಾತ್ರೆ ಇತ್ತು. ಕೆಲವರು ದೇವರು ಹಾಲು ಕುಡಿಯುವುದನ್ನು ಅಚ್ಚರಿಯಿಂದ ನೋಡುತ್ತಿದ್ದರೆ, ಇನ್ನೂ ಕೆಲವರು ಇದು ಭಕ್ತರನ್ನು ಮೋಸ ಮಾಡುತ್ತಿದ್ದಾರೆ ಎಂದಿದ್ದಾರೆ.

ಸುಧಾಮನಗರದಲ್ಲಿರುವ ಅಂಗಾಳ ಪರಮೇಶ್ವರಿ ದೇವಿಯ ಕಲ್ಲಿನ ಮೂರ್ತಿ ಹಾಲು ಕುಡಿದಿದೆ. ಈ ವಿಚಾರ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಹೀಗಾಗಿ ಅಂಗಾಳ ಪರಮೇಶ್ವರಿ ದೇವಿಗೆ ಹಾಲು ಕುಡಿಸಲು ಭಕ್ತರ ದಂಡೇ ನೆರೆದಿತ್ತು. ಕಲ್ಲಿನಮೂರ್ತಿ ಹಾಲು ಕುಡಿಯುತ್ತಿರುವ ದೃಶ್ಯವನ್ನು ಭಕ್ತರು ಮೊಬೈಲ್ನಲ್ಲಿ ಸೆರೆ ಹಿಡಿದ್ದಾರೆ. ಭಕ್ತರು ಸಂಜೆ ಆರು ಗಂಟೆಯಿಂದ ರಾತ್ರಿ ಹತ್ತು ಗಂಟೆಯ ತನಕ ದೇವಿಗೆ ಹಾಲು ಕುಡಿಸಿದ್ದಾರೆ. ಈ ಅಚ್ಚರಿಯನ್ನು ಕಣ್ಣು ತುಂಬಿಕೊಳ್ಳಲು ಬೇರೆ ಬೇರ ಭಾಗಗಳಿಂದ ಜನರು ಬಂದಿದ್ದರು. ಹತ್ತು ಗಂಟೆಯ ನಂತರ ದೇವಿ ಹಾಲು ಕುಡಿಯುವುದನ್ನು ನಿಲ್ಲಿಸಿದ್ದಾಳೆ.

ಫ್ರೆಶ್ ನ್ಯೂಸ್

Latest Posts

Featured Videos