ಕಲಬುರಗಿಯಲ್ಲಿ ಖರ್ಗೆಗೆ ಜಾಧವ್ ಶಾಕ್!

ಕಲಬುರಗಿಯಲ್ಲಿ ಖರ್ಗೆಗೆ ಜಾಧವ್ ಶಾಕ್!

ಕಲಬುರಗಿ, ಮೇ. 23, ನ್ಯೂಸ್ಎಕ್ಸ್ ಪ್ರೆಸ್‍: ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಶಾಕ್ ಕೊಟ್ಟಿದ್ದಾರೆ.

ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಖ್ಯಾತಿಗಳಿಸಿ   ಮಲ್ಲಿಕಾರ್ಜುನ ಖರ್ಗೆಗೆ ಭಾರಿ ಮುಖಭಂಗವಾಗಿದೆ. ಬಿಜೆಪಿಯ ಉಮೇಶ್ ಜಾಧವ್ ಅವರು ಸುಮಾರು 1 ಲಕ್ಷ ಅಧಿಕ ಮತಗಳಿಂದ ಸೋಲಿಸಿದ್ದಾರೆ.  ಖರ್ಗೆ   9 ವಿಧಾನಸಭೆ, ಎರಡು ಬಾರಿ ಲೋಕಸಭೆಗೆ ಪ್ರವೇಶ ಮಾಡಿದ್ದರು. ಆದ್ರೆ,  3ನೇ ಬಾರಿ ಲೋಕಸಭಾ ಪ್ರವೇಶ ಮಾಡಲು ಕನಸು ಕಾಣುತ್ತಿದ್ದ ಸೋಲಿಲ್ಲದ ಸರದಾರನಿಗೆ ಉಮೇಶ್ ಜಾಧವ್ ಶಾಕ್ ನೀಡಿದ್ದಾರೆ.  2014ರ ಫಲಿತಾಂಶ ಡಾ. ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್) 5,07,193,ರೇವು ನಾಯಕ ಬೆಳಮಗಿ (ಬಿಜೆಪಿ) 4,32,460  ಸುಮಾರು 1 ಲಕ್ಷ ಅಂತರದಿಂದ ಗೆಲುದಾಖಲಿಸಿಕೊಂಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos