ಕಲಬುರಗಿ ಮಹಾದಾಸೋಹಿ ಶರಣಬಸವೇಶ್ವರ ಗುಡಿಗೆ ಭಕ್ತ ಸಾಗರ

ಕಲಬುರಗಿ ಮಹಾದಾಸೋಹಿ ಶರಣಬಸವೇಶ್ವರ ಗುಡಿಗೆ ಭಕ್ತ ಸಾಗರ

ಕಲಬುರಗಿ, ಆ.7 : ಶ್ರಾವಣ ಮಾಸದ ಹಿನ್ನಲೆ ಸೋಮವಾರ ಆರಾಧ್ಯ ದೈವ ಮಹಾದಾಸೋಹಿ ಶರಣಬಸವೇಶ್ವರರ ದರ್ಶನ ಪಡೆಯಲು ಭಕ್ತಸಾಗರವೇ ಹರಿದು ಬಂದಿತು. ದೇಗುಲ ಆವರಣದಲ್ಲಿ ಕಿಕ್ಕಿರಿದ ಜನರನ್ನು ನೋಡಿದರೆ ಮಿನಿ ಜಾತ್ರೆಯಂತೆ ಕಂಡಿತು. ನಸುಕಿನ ಜಾವದಿಂದಲೇ ಸಹಸ್ರಾರು ಭಕ್ತರು ನಡೆದುಕೊಂಡು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆಯಲು ಸರತಿಯಲ್ಲಿ ನಿಂತಿದ್ದರು. ವಿಶೇಷವಾಗಿ ಅಲಂಕಾರಗೊಂಡ ಶರಣಬಸವೇಶ್ವರರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕಾಯಿ, ಕಪರ್ೂರ, ಹೂವಿನ ವ್ಯಾಪಾರ ಜೋರಾಗಿ ನಡೆಯಿತು. ಭಕ್ತರು ಅನ್ನದಾಸೋಹ ಮಾಡುವ ಪದ್ಧತಿಯಿದ್ದು, ಹಲವರು ತಮ್ಮ ಮನೆಗಳಲ್ಲಿ ಅನ್ನ, ಸೀರಾ ಇತರೆ ಪ್ರಸಾದ ತಯಾರಿಸಿಕೊಂಡು ಬಂದು ದೇವರಿಗೆ ನೈವೇದ್ಯ ಅರ್ಪಿಸಿದ ಬಳಿಕ ಭಕ್ತರಿಗೆ ವಿತರಿಸಿದರು. ದೇವರ ದರ್ಶನದ ಬಳಿಕ ಭಕ್ತರು ಸಂಸ್ಥಾನದ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ ಆಶೀರ್ವಾದ ಪಡೆದರು.
ಶ್ರಾವಣ-ಶ್ರವಣ ಎನ್ನುವಂತೆ ಅಖಿಲ ಭಾರತ ಅನುಭವ ಮಂಟಪದಿಂದ ದೇವಸ್ಥಾನ ಆವರಣದಲ್ಲಿ ಪ್ರತಿದಿನ ಸಂಜೆ 7ರಿಂದ ಪ್ರವಚನ, ಉಪನ್ಯಾಸ, ವಚನ ಸಂಗೀತೋತ್ಸವ ಹೀಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಫ್ರೆಶ್ ನ್ಯೂಸ್

Latest Posts

Featured Videos