ಕಲಬುರಗಿಯಲ್ಲಿ ‘ಬಿಸಿಲಿ’ನ ಝಳ!

ಕಲಬುರಗಿಯಲ್ಲಿ ‘ಬಿಸಿಲಿ’ನ ಝಳ!

ಕಲಬುರಗಿಮೇ. 30, ನ್ಯೂಸ್‍ ಎಕ್ಸ್ ಪ್ರೆಸ್‍: ತೋಗರಿಯ ಕಣಜ, ಬಿಸಿಲಿನ ನಾಡು ಎಂದು ಖ್ಯಾತಿಯಾಗಿರುವ ಕಲಬುರಗಿ ನಾಡಿನಲ್ಲಿ ಬಿಸಿಲ ಬೇಗೆಗೆ ಜನ ತತ್ತರಿಸಿ ಹೋಗಿದ್ದಾರೆ. ಬಿಸಿಲ ಝಳ ಭಾರೀ ಹೆಚ್ಚಾಗಿದೆ. ಮುಂಗಾರು ಪೂರ್ವ ಮಳೆಯಿಂದಾಗಿ ಅಲ್ಲಲ್ಲಿ ಒಂದೆರಡು ದಿನ ತಂಪಿನ ಅನುಭವವಾದರೂ, ಮತ್ತೆ ಬಿಸಿಲ ಹೊಡೆತದಿಂದ ಜನ ಹೈರಾಣಾಗಿದ್ದಾರೆ.

ಕಲಬುರಗಿಯಲ್ಲಿ ಅತ್ಯಧಿಕ 46 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹಾಗೂ ಕನಿಷ್ಠ 30.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಬಿಸಿಲ ಪ್ರಖರತೆ, ಬಿಸಿ ಗಾಳಿಯಿಂದಾಗಿ ಜಿಲ್ಲೆಯ ಜನ ತತ್ತರಿಸಿಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಜೂನ್ 14 ರವರೆಗೆ ಶಾಲೆಗಳಿಗೆ ರಜೆ ವಿಸ್ತರಿಸಲಾಗಿದೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಸಿಲಿನಿಂದಾಗಿ ಜನ ತತ್ತರಿಸಿ ಹೋಗಿದ್ದು, ದಿನೇದಿನೆ ಏರುತ್ತಿರುವ ಉಷ್ಣಾಂಶಕ್ಕೆ ಹೈರಾಣಾಗಿದ್ದಾರೆ. ಕಲಬುರಗಿಯಲ್ಲಿ ಉಷ್ಣಾಂಶ ದಾಖಲೆ ಬರೆದಿದ್ದು, ಹೈರಾಣಾದ ಜನ ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos