ಸೆರೆಯಾಯ್ತು ಕಳ್ಳರ ಕೈಚಳಕ

ಸೆರೆಯಾಯ್ತು ಕಳ್ಳರ ಕೈಚಳಕ

ಚೆನ್ನೈ , ಅ. 03 : ಚಿನ್ನದ ಅಂಗಡಿಗೆ ಕನ್ನ ಕೊರೆದಿರುವ ಇಬ್ಬರು ಕಳ್ಳರು 13 ಕೋಟಿ ಮೌಲ್ಯದ 30 ಕೆ.ಜಿ ಚಿನ್ನಾಭರಣ ದೋಚಿಸುವ ಘಟನೆ ತಮಿಳುನಾಡಿನ ತಿರುಚ್ಚಿ ಎಂಬಲ್ಲಿ ನಡೆದಿದೆ.

ತಿರುಚ್ಚಿ ಜಿಲ್ಲೆಯ ಕೇಂದ್ರಭಾಗದಲ್ಲೇ ಇರುವ ಲಲಿತಾ ಜ್ಯುವೆಲರ್ಸ್ ಎಂಬ ಚಿನ್ನದ ಅಂಗಡಿಯ ಗೋಡೆಗೆ ಕನ್ನ ಕೊರೆದಿರುವ ಕಳ್ಳರು ಒಳಗೆ ಪ್ರವೇಶಿಸಿದ್ದಾರೆ. ಹೀಗೆ ಒಳ ನುಸುಳಿರುವ ಕಳ್ಳರು ಜ್ಯುವೆಲರಿನಲ್ಲಿದ್ದ ಸುಮಾರು 30 ಕೆ.ಜಿ ತೂಕದ 13 ಕೋಟಿ ಮೌಲ್ಯದ 800ಕ್ಕೂ ಅಧಿಕ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಮೂರು ಬಹುಮಹಡಿ ಕಟ್ಟಡವಾದ ಲಲಿತಾ ಜ್ಯವೆಲರ್ಸ್ನಲ್ಲಿ ಎಲ್ಲಾ ಕಡೆಗಳಲ್ಲಿ ಸಿಸಿಟಿವಿಯನ್ನು ಅಳವಡಿಸಲಾಗಿದೆ. ಆದರೆ ಈ ವೇಳೆ ಯಾರಿಗೂ ತಮ್ಮ ಗುರುತು ಪತ್ತೆಯಾಗದಿರಲಿ ಎಂಬ ಕಾರಣಕ್ಕೆ ಕಳ್ಳರು ಮುಖಕ್ಕೆ ಮಾಸ್ಕ್ ಧರಿಸಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos