ಕಾಲ್ಗೆಜ್ಜೆ ಮಾರಿ ತಾಯಿಗೆ ಚಿಕಿತ್ಸೆ: ರಶ್ಮಿ

ಕಾಲ್ಗೆಜ್ಜೆ ಮಾರಿ ತಾಯಿಗೆ ಚಿಕಿತ್ಸೆ: ರಶ್ಮಿ

ಬೆಂಗಳೂರು,   ಅ. 18 : ‘’ನನ್ನ ತಾಯಿಗೆ ವೀಝಿಂಗ್ ಇದ್ದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದುಕೊಂಡಿದೆ. ಆದರೆ ನನ್ನ ಬಳಿ ಹಣವಿರಲಿಲ್ಲ. ಹೀಗೆ ರಸ್ತೆಯಲ್ಲಿ ಹೋಗುವಾಗ ಕಾಲ್ಗೆಜ್ಜೆ ಬಿದ್ದಿತ್ತು. ಅದನ್ನು ಮಾರಿ ನನ್ನ ತಾಯಿಗೆ ಚಿಕಿತ್ಸೆ ಕೊಡಿಸಿದ್ದೇನೆ ಎಂದು ದುನಿಯಾ ರಶ್ಮಿ ತಮ್ಮ ಅಳಲ ತೊಡಿಕೊಂಡರು.
ಬಿಗ್ ಬಾಸ್ ಸೀಸನ್ -7 ಸ್ಪರ್ಧಿ ದುನಿಯಾ ರಶ್ಮಿ ಅವರು ನಾನು ಸತ್ತು ಹುಟ್ಟಿದ್ದವಳು ಎಂಬ ವಿಷಯ ಪ್ರಸ್ತಾಪ ಮಾಡುವ ಮೂಲಕ ತಮ್ಮ ತಂದೆ-ತಾಯಿ ಜೊತೆ ಆಗಿರುವ ಅನುಭವ ಹಂಚಿಕೊಂಡು, ಅಪ್ಪ-ಅಮ್ಮನ ನಡುವೆ ಜಗಳವಾಗುತ್ತಿತ್ತು.ಶಬ್ದ ಕೇಳಿ ನಾನು ಒಳಗಡೆ ಹೋಗಿ ನೋಡಿದೆ. ನನ್ನ ತಂದೆ ತಾಯಿಯ ತಾಳಿ ಎಳೆಯುತ್ತಿದ್ದರು. ಮನೆಯಲ್ಲಿ ಇರುವುದು ಬೇಡ. ಬೇರೆ ಎಲ್ಲಿಯಾದರೂ ದೂರ ಹೋಗೋಣ ಎಂದರು. ಬಳಿಕ ಆ ರಾತ್ರಿಯೇ ನಾವು ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದೇವು. ಆ ಸಂದರ್ಭದಲ್ಲಿ ನಮ್ಮ ಬಳಿ ಹಣವಿರಲಿಲ್ಲ, ಕೇವಲ ಚಿನ್ನವಿತ್ತು. ಮನೆ ಬಿಟ್ಟು ಬಂದ ನಂತರ ನನ್ನ ತಂದೆಗೆ ಕರೆ ಮಾಡಿದಾಗ ನೀನು ಯಾರು ಎಂದು ಪ್ರಶ್ನಿಸಿದರು ಎಂದರು.
ಈ ಟಾಸ್ಕ್ ನಲ್ಲಿ ಮಾತನಾಡಿದ ದುನಿಯಾ ರಶ್ಮಿ, ನಮ್ಮ ತಂದೆ-ತಾಯಿಗೆ ಮೂರು ಜನ ಮಕ್ಕಳಿದ್ದರು. ಮೊದಲು ನನ್ನ ಅಣ್ಣ ಹುಟ್ಟಿದ್ದ. ಬಳಿಕ ನಾನು ಹುಟ್ಟಿದೆ. ಆದರೆ ನನ್ನ ತಂದೆಗೆ ಹೆಣ್ಣು ಮಕ್ಕಳೆಂದರೆ ಇಷ್ಟವಿರಲಿಲ್ಲ. ನನ್ನ ತಾಯಿ ಹಾಗೂ ದೊಡ್ಡಮ್ಮ ನನ್ನ ತಂದೆಗೆ ಸಮಾಧಾನ ಮಾಡಿದ್ದರು..

ಫ್ರೆಶ್ ನ್ಯೂಸ್

Latest Posts

Featured Videos