ಬಿಸಿಲನಾಡು ಕಲಬುರಗಿಯಲ್ಲಿ ಕಮಲವನ್ನರಳಿಸಲು ಮೋದಿ ಭಾಷಣ

ಬಿಸಿಲನಾಡು ಕಲಬುರಗಿಯಲ್ಲಿ ಕಮಲವನ್ನರಳಿಸಲು ಮೋದಿ ಭಾಷಣ

ಕಲಬುರಗಿ, ಮಾರ್ಚ್ 6, ನ್ಯೂಸ್‍ ಎಕ್ಸ್ ಪ್ರೆಸ್‍: ಬಿಸಿಲ ನಾಡಿನಲ್ಲಿ ಕಮಲ ಅರಳಿಸಲು ಪಣ ತೊಟ್ಟಿರುವ ಬಿಜೆಪಿ ಬೃಹತ್‌ ರ್ಯಾಲಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರ ಕಲಬುರಗಿಗೆ ಮೋದಿ ಆಗಮಿಸಿದ್ದು, ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ಇಂದು ಕಲಬುರಗಿ ನಗರದ ಎನ್‌.ವಿ.ಮೈದಾನದಲ್ಲಿ ಕರ್ನಾಟಕ ಬಿಜೆಪಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಮೈತ್ರಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆದಿರು.

ಭಾರತ್ ಮಾತಾಕಿ ಜೈ ಎಂಬ ಘೋಷಣೆ ಮೊಳಗಿಸುವುದರೊಂದಿಗೆ ಪ್ರಧಾನಿ ಮೋದಿ ಭಾಷಣ ಆರಂಭಿಸಿ, ಅಧಿಕಾರ ದಾಹಿ ಕಾಂಗ್ರೆಸ್‍, ರಿಮೋಟ್‍ ಕಂಟ್ರೋಲ್‍ ಸಿಎಂ. ದೆಹಲಿ ಸರ್ಕಾರ ರೈತರಿಗೆ ಹಣ ಕೊಟ್ರೆ ನಿಮಗೇಕೆ ಹೊಟ್ಟೆ ನೋವು, ಸಮಸ್ಯೆ ಯಾಕೆ ಅಂದ್ರೆ ಮೋದಿ ನೇರವಾಗಿ ರೈತರ ಖಾತೆಗೆ ಹಣ ಹಾಕ್ತಿದ್ದಾರೆ. ಮಧ್ಯದಲ್ಲಿ ಎರಡು, ಐದು ರೂಪಾಯಿಯೂ ಎಗರಿಸಲು ಆಗ್ತಿಲ್ಲ ಅಂತ ಸಂಕಟ ಆಗಿದೆ  ಎಂದು ಮೈತ್ರಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

ರಿಮೋಟ್‍ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿಯಿಂದ ಅಭಿವೃದ್ಧಿ ಸಾಧ್ಯವಿಲ್ಲ. ರೈತ ವಿರೋಧಿಗಳು ನಿಮ್ಮ ಕರ್ನಾಟಕ ಸರ್ಕಾರದ ರೂಪದಲ್ಲಿದ್ದಾರೆ ಎಂದು ಮೈತ್ರಿ ಸರ್ಕಾರವನ್ನು ಟೀಕಿಸಿದರು.

ದಶಕಗಳ ನಿರೀಕ್ಷೆಯ ಬಳಿಕ ಬೀದರ್-ಕಲಬುರಗಿ ರೈಲ್ವೇ ಮಾರ್ಗವನ್ನು ನಮ್ಮ ಸರಕಾರ ಜನತೆಗೆ ಸಮರ್ಪಿಸಿದೆ. ಹಲವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ನಮ್ಮ ಸರಕಾರ ಜಾರಿಗೊಳಿಸಿದೆ.

ದೇಶದ 3 ಕೋಟಿಗೂ ಅಧಿಕ ತೆರಿಗೆದಾರರಿಗೆ ವಿನಾಯಿತಿ ನೀಡಿದ್ದೇವೆ. ಐಟಿ ಇಲಾಖೆ ಮೇಲ್ಮನವಿ ಪ್ರಾಧಿಕಾರದ ಹೊಸ ಕಟ್ಟಡ ನಿರ್ಮಿಸಲಾಗಿದೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಪ್ರಧಾನಿ ಮೋದಿ ಅವರ ಆಡಳಿತದ ಸಾಧನೆಗಳನ್ನು ಶ್ಲಾಘಿಸಿದರು.

ಪ್ರಧಾನಿ ಮೋದಿ ನೇತೃತ್ವದ ಸರಕಾರದಲ್ಲಿ ಒಂದೇ ಒಂದು ಹಗರಣವೂ ನಡೆದಿಲ್ಲ. ಸ್ವಚ್ಛ, ದಕ್ಷ ಹಾಗೂ ಬಲಿಷ್ಠ ಆಡಳಿತವನ್ನು ಪ್ರಧಾನಿ ಮೋದಿ ನೀಡಿದ್ದಾರೆ ಎಂದು ಯಡಿಯೂರಪ್ಪ  ಮೋದಿಯನ್ನು ಶ್ಲಾಘಿಸಿದರು.

ಭಾರತ್ ಪೆಟ್ರೋಲಿಯಂ ಡಿಪೋ ಸೇರಿದಂತೆ ಕಲಬುರಗಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos