ಹಂಪಿ ಮಾದರಿಯಲ್ಲಿ, ಕಲಬುರಗಿಯಲ್ಲೂ ಹೈಟೆಕ್ ಮೆರುಗು; ಸಿ ಎಂ ಸಿದ್ದರಾಮಯ್ಯ

ಹಂಪಿ ಮಾದರಿಯಲ್ಲಿ, ಕಲಬುರಗಿಯಲ್ಲೂ ಹೈಟೆಕ್ ಮೆರುಗು; ಸಿ ಎಂ ಸಿದ್ದರಾಮಯ್ಯ

ಕಲಬುರಗಿ: ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನೆಯ 75ನೇ ವರ್ಷಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಸಿ ಎಂ ಸಿದ್ದರಾಮಯ್ಯ ಐತಿಹಾಸಿಕ ವಿಜಯನಗರ ಜಿಲ್ಲೆಯ ಹಂಪಿಯನ್ನು ಪ್ರವಾಸೋದ್ಯಮಕ್ಕೆ ಉತ್ತೇಜಿಸಲು ಕರ್ನಾಟಕ ಸರ್ಕಾರವು 3D ಪ್ರೊಜೆಕ್ಷನ್, ಮಲ್ಟಿಮೀಡಿಯಾ, ಧ್ವನಿ ಮತ್ತು ಬೆಳಕಿನ ಪ್ರದರ್ಶನಗಳನ್ನು ಪ್ರಾರಂಭಿಸಲಿದೆ ಇದೇರೀತಿ ಬೀದರ್ ನಗರದ ಐತಿಹಾಸಿಕ ಬೀದರ್ ಕೋಟೆಯಲ್ಲಿಯೂ ಸೌಕರ್ಯಗಳು ಬರಲಿವೆ ಎಂದು ಕ್ಷೇತ್ರಕ್ಕೆ ವಿಶೇಷ ಸ್ಥಾನಮಾನ ನೀಡುವ 371(ಜೆ) ಕಲಂ ಜಾರಿಯಾಗಿ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿ ಹೇಳಿದರು.
‘ಕಲ್ಯಾಣ ಕರ್ನಾಟಕವನ್ನು ಅಕ್ಷರಶಃ ಕಲ್ಯಾಣ ರಾಜ್ಯವಾಗಿ ಮಾಡುವ ಸಂಕಲ್ಪ ಹೊಂದಿದ್ದು, ಈ ಭಾಗದಲ್ಲಿ ಫಲಿತಾಂಶ ಕೇಂದ್ರಿತ ಕಾರ್ಯಕ್ರಮ ಅನುಷ್ಠಾನ ಮಾಡುವ ಮೂಲಕ ಅಭಿವೃದ್ಧಿಯ ಹೊಸ ಭಾಷ್ಯ ಬರೆಯುತ್ತೇವೆ’ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕಲ್ಯಾಣದ ಅಭಿವೃದ್ಧಿಯ ಹೊರತು ರಾಜ್ಯದ ಅಭಿವೃಧ್ಧಿ ಅಸಾಧ್ಯ. ‘ಇಲ್ಲಿನ ಜನರ ತಲಾ ಆದಾಯ ವೃದ್ಧಿ ಜೊತೆಗೆ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಸುಧಾರಣೆ ಸೇರಿ ಸವಾಂರ್ಗೀಣ ಅಭಿವೃದ್ಧಿ ನಮ್ಮ ಸರ್ಕಾರ ಗುರಿಯಾಗಿದೆ’ ಎಂದು ಕಳಕಳಿ ವ್ಯಕ್ತಪಡಿಸಿದರು.
ಬೀದರ್ನಲ್ಲಿ ಕೃಷ್ಣಮೃಗ ಸಂರಕ್ಷಣಾ ಕೇಂದ್ರಕ್ಕೆ ಸರ್ಕಾರ 2 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ಈ ಭಾಗದ ವಿವಿಧ ಜಾನಪದ ಕಲಾ ಸಂಪ್ರದಾಯಗಳನ್ನು ಎತ್ತಿ ಹಿಡಿಯುವ ‘ಜಾನಪದ ಲೋಕ’ ವನ್ನು ಕೊಪ್ಪಳದಲ್ಲಿ 3.5 ಕೋಟಿ ರೂ.ಗಳಲ್ಲಿ ಸ್ಥಾಪಿಸಲಾಗುವುದು ಎಂದರು.
ವರದಿ
ಮಂಜುನಾಥ.ಲಕ್ಕಿಮರ(ವಿಜಯನಗರ)

ಫ್ರೆಶ್ ನ್ಯೂಸ್

Latest Posts

Featured Videos