ಕಾದಾಟದಲ್ಲಿ 3 ಹುಲಿ ಸಾವು

ಕಾದಾಟದಲ್ಲಿ 3 ಹುಲಿ ಸಾವು

ಉಮರಿಯಾ, ಆ.01 : ಹುಲಿಗಳ ಅತಿ ದೊಡ್ಡ ಆವಾಸ್ಥಾನ ಮತ್ತು ಹುಲಿಗಳಿಗೆ ಅತ್ಯಂತ ಸುರಕ್ಷಿತ ಸ್ಥಾನವೆಂಬ ಹೆಗ್ಗಳಿಕೆ ಭಾರತದ ಪಾತ್ರ ಮಹತ್ವದಾಗಿದೆ. ಜಗತ್ತಿನ ಎಲ್ಲಾ ಹುಲಿಗಳ ಪೈಕಿ ಮಧ್ಯಪ್ರದೇಶ ಪ್ರಥಮ ಸ್ಥಾನದಲ್ಲಿ ವಿರಾಜಮಾನವಾಗಿದೆ. ಕರ್ನಾಟಕವನ್ನು 2ನೇ ಸ್ಥಾನಕ್ಕೆ ತಳ್ಳಿ ಹಾಕಿ ಮಧ್ಯ ಪ್ರದೇಶ ಪ್ರಥನ ಸ್ಥಾನದಲ್ಲಿದೆ. ಮೂಕ ಪ್ರಾಣಿಗಳು ಕಚ್ಚಾಟ ಮಾಡುವುದು ಸಾಮಾನ್ಯ. ಆದರೆ ಗಣತಿ ವರದಿ ಬಿಡುಗಡೆಗೊಂಡ 4ನೇ ದಿನದಲ್ಲಿ ಮಧ್ಯಪ್ರದೇಶದ ವಿವಿಧ ಹುಲಿ ಅಭಯಾರಣ್ಯಗಳಲ್ಲಿ ಪರಸ್ಪರ ಕಾದಾಡಿಕೊಂಡು ಒಂದು ಗಂಡು, ಒಂದು ಹೆಣ್ಣು ಹಾಗೂ ಒಂದು ಹುಲಿ ಮರಿ ಸೇರಿ ಒಟ್ಟು 3 ಹುಲಿಗಳು ಸಾವನ್ನಪ್ಪಿವೆ ಎಂದು ಫಾರೆಸ್ಟ್ ರೇಂಜರ್ ಪಿ.ಕೆ.ತ್ರಿಪಾಠಿ ಮಾಹಿತಿ ನೀಡಿದ್ದಾರೆ. ಸೋಮವಾರವಷ್ಟೇ ಹುಲಿ ಗಣತಿ ಬಿಡುಗಡೆ ಮಾಡಿದ್ದ ಪ್ರಧಾನಿ ಮೋದಿ ದೇಶದಲ್ಲೇ ಅತಿ ಹೆಚ್ಚಿನ ಹುಲಿಗಳನ್ನು ಹೊಂದಿರುವ ರಾಜ್ಯವೆಂದು ಮಧ್ಯಪ್ರದೇಶವನ್ನು (526) ಘೋಷಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos