ಕಚ್ಚಿದ ಹಾವನ್ನು ಕಚಕಚನೆ ಕಚ್ಚಿ ತಿಂದ ವೃದ್ಧ..!

ಕಚ್ಚಿದ ಹಾವನ್ನು ಕಚಕಚನೆ ಕಚ್ಚಿ ತಿಂದ ವೃದ್ಧ..!

ಗುಜರಾತ್, ಮೇ.6, ನ್ಯೂಸ್ ಎಕ್ಸ್ ಪ್ರೆಸ್:  ಗುಜರಾತ್ ನ ಮಹಿಸಾಗರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ವೃದ್ಧನೊಬ್ಬನಿಗೆ ಹಾವೊಂದು ಕಚ್ಚಿದೆ. ಇದ್ರಿಂದ ಕೋಪಗೊಂಡ ವೃದ್ಧ ಹಾವಿಗೆ ಕಚ್ಚಿದ್ದಾನೆ. ನಂತ್ರ ಹಾವನ್ನು ತಿನ್ನಲು ಯತ್ನಿಸಿದ್ದಾನೆ. ಆದ್ರೆ ಜನರು ಇದನ್ನು ತಡೆದಿದ್ದಾರೆ. ಅಜನಾವ್ ಗ್ರಾಮದ 70 ವರ್ಷದ ಪರ್ವತ್ ಗಾಲಾ ತೋಟದಲ್ಲಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ಈ ವೇಳೆ ಪರ್ವತ್ ಗೆ ಹಾವು ಕಚ್ಚಿದೆ.

ಇದ್ರಿಂದ ಭಯಗೊಳ್ಳದ ಪರ್ವತ್, ತಕ್ಷಣ ಹಾವನ್ನು ಕೈನಲ್ಲಿ ಹಿಡಿದು ಹಾವಿಗೆ ಕಚ್ಚಲು ಶುರುಮಾಡಿದ್ದಾನೆ. ಹಾವನ್ನು ಕಚ್ಚುತ್ತಿದ್ದಂತೆ ಆತನಿಗೆ ಪ್ರಜ್ಞೆ ತಪ್ಪಿದೆ. ತಕ್ಷಣ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ವೃದ್ಧ ಸಾವನ್ನಪ್ಪಿದ್ದಾನೆಂದು ವೈದ್ಯರು ಹೇಳಿದ್ದಾರೆ. ಹಾವನ್ನು ಪರ್ವತ್ ಗಾಲಾ ಕಚ್ಚುತ್ತಿದ್ದಂತೆ ವಿಷ ವೇಗವಾಗಿ ಆತನ ದೇಹ ಸೇರಿದೆ. ಹಾಗಾಗಿ ಅಲ್ಲಿಯೇ ಪರ್ವತ್ ಸಾವನ್ನಪ್ಪಿದ್ದಾನೆಂದು ವೈದ್ಯರು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos