ಕಾಬೂಲ್ ನಲ್ಲಿ ತ್ರಿವಳಿ ಬಾಂಬ್

ಕಾಬೂಲ್ ನಲ್ಲಿ ತ್ರಿವಳಿ ಬಾಂಬ್

ಕಾಬೂಲ್, ಜು. 25 : ಅಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಕಾಬೂಲ್ನಲ್ಲಿ ಇಂದು ತ್ರಿವಳಿ ಬಾಂಬ್ ಸ್ಫೋಟಗೊಂಡ ಪರಿಣಾಮ 12 ಮಂದಿ ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ.
ಸರ್ಕಾರಿ ನೌಕರರು ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಮೊದಲ ಬಾಂಬ್ ಸ್ಫೋಟ ಸಂಭವಿಸಿದೆ. ಗಣಿ ಮತ್ತು ಪೆಟ್ರೋಲಿಯಂ ಸಚಿವಾಲಯದ 5 ಸಿಬ್ಬಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಎರಡನೇ ಬಾಂಬ್ ಸ್ಫೋಟದಲ್ಲಿ 7 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಆತ್ಮಾಹುತಿ ಬಾಂಬ್ ದಾಳಿಕೋರನಿಂದ ಎರಡನೇ ಬಾಂಬ್ ಸ್ಫೋಟಗೊಂಡಿದೆ. ಬಳಿಕ ಅಪರಿಚಿತ ಉಗ್ರರು ಕಾರನ್ನು ಸ್ಫೋಟಿಸಿದಾಗ ಮೂರನೇ ಸ್ಫೋಟ ಸಂಭವಿಸಿದೆ ಎಂದು ಕಾಬೂಲ್ನ ಆಂತರಿಕ ಸಚಿವಾಲಯದ ವಕ್ತಾರ ನಸ್ರತ್ ರಹೀಮಿ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos