‘ಕಾಟೇರ’ ಬಿಡುಗಡೆ ದಿನಾಂಕ ಘೋಷಣೆ!

‘ಕಾಟೇರ’ ಬಿಡುಗಡೆ ದಿನಾಂಕ ಘೋಷಣೆ!

ಬೆಂಗಳೂರು: ನಮ್ಮ ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ಎಂದರೆ ಅತ್ಯತ ದೊಡ್ಡ ಮಟ್ಟ ಕ್ರೇಸ್ ಸೃಷ್ಟಿಯಾಗುತ್ತದೆ. ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಡಿ ಬಾಸ್ ಎಂದು ಕರೆಯುತ್ತಾರೆ. ಇವರು ನಮ್ಮ ಕನ್ನಡದ ಟಾಪ್ ನಟರಲ್ಲಿ ಒಬ್ಬರು. ಇವರ ಸಿನಿಮಾ ಎಂದರೆ ಅದು ಅಭಿಮಾನಿಗಳಿಗೆ ಹಬ್ಬದ ರೀತಿಯಲ್ಲಿ ಸಂಭ್ರಮ. ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ತನ್ನ ಹೆಸರು, ಪೋಸ್ಟರ್ನಿಂದ ಈಗಾಗಲೇ ಗಮನ ಸೆಳೆದಿದೆ.

‘ಕಾಟೇರ’ ಸಿನಿಮಾ ಡಿಸೆಂಬರ್ 29ರಂದು ತೆರೆಗೆ ಬರಲಿದೆ. ಡಿಸೆಂಬರ್ ತಿಂಗಳಲ್ಲಿ ಬಾಲಿವುಡ್ನ ಹಾಗೂ ದಕ್ಷಿಣ ಭಾರತದ ಕೆಲವು ದೊಡ್ಡ ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರುತ್ತಿವೆ. ಅದರ ನಡುವೆ ದರ್ಶನ್ ಸಿನಿಮಾ ಬಿಡುಗಡೆ ಆಗುತ್ತಿದೆ. ಭಾರಿ ನಿರೀಕ್ಷೆಯ ಸಿನಿಮಾಗಳ ನಡುವೆಯೇ ‘ಕಾಟೇರ’ ಸಿನಿಮಾದ ಬಿಡುಗಡೆಗೆ ಸಜ್ಜಾಗಿರುವುದು ಚಿತ್ರತಂಡದ ಆತ್ಮವಿಶ್ವಾಸವನ್ನು ಎತ್ತಿ ತೋರಿಸುತ್ತಿದೆ.

ನಿನ್ನೆ ಸಣ್ಣ ಟೀಸರ್ ಮೂಲಕ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ದರ್ಶನ್ರ ಅಭಿಮಾನಿಗಳಿಗೆ ಬೇಕಾದ ಮಾಸ್ ಸರಕು ಸಿನಿಮಾದಲ್ಲಿ ಇರಲಿದೆ ಎಂಬುದನ್ನು ಟೀಸರ್ ಸಾರಿ ಹೇಳುತ್ತಿದೆ. ದರ್ಶನ್, ಕುಲುಮೆಯಲ್ಲಿ ಮಚ್ಚುಗಳನ್ನು ಮಾಡುತ್ತಿರುವ ದೃಶ್ಯ, ಮಚ್ಚುಗಳ ರಾಶಿ, ಈ ಸಿನಿಮಾ ಪಕ್ಕಾ ಮಾಸ್ ಆಕ್ಷನ್ ಸಿನಿಮಾ ಎಂಬುದನ್ನು ಜೋರಾಗಿಯೇ ಸಾರುತ್ತಿವೆ. ಟೀಸರ್ನ ಕೊನೆಯಲ್ಲಿ ದರ್ಶನ್ ನಾಟಿ ಬೀಡಿ ಹೊತ್ತಿಸುವ ಸ್ಟೈಲ್ ಸಹ ಭಿನ್ನವಾಗಿದೆ.

‘ಕಾಟೇರ’ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿ. ಇದು ಇವರ ಮೊದಲ ಸಿನಿಮಾ. ಸಿನಿಮಾಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಜಗಪತಿ ಬಾಬು ವಿಲನ್ ಆಗಿ ನಟಿಸಿದ್ದಾರೆ. ‘ರಾಬರ್ಟ್’ ಬಳಿಕ ಮತ್ತೊಮ್ಮೆ ದರ್ಶನ್ ಸಿನಿಮಾಕ್ಕೆ ವಿಲನ್ ಆಗಿದ್ದಾರೆ ಜಗಪತಿ ಬಾಬು.

ಫ್ರೆಶ್ ನ್ಯೂಸ್

Latest Posts

Featured Videos