‘ಕಾಟೇರ’ ಚಿತ್ರದ  ಪಸಂದಾಗವ್ನೆ ಸಾಂಗ್ ಬಿಡುಗಡೆ!

‘ಕಾಟೇರ’ ಚಿತ್ರದ  ಪಸಂದಾಗವ್ನೆ ಸಾಂಗ್ ಬಿಡುಗಡೆ!

ಬೆಂಗಳೂರು: ನಮ್ಮ ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ಎಂದರೆ ಅತ್ಯತ ದೊಡ್ಡ ಮಟ್ಟ ಕ್ರೇಸ್ ಸೃಷ್ಟಿಯಾಗುತ್ತದೆ. ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಡಿ ಬಾಸ್ ಎಂದು ಕರೆಯುತ್ತಾರೆ. ಇವರು ನಮ್ಮ ಕನ್ನಡದ ಟಾಪ್ ನಟರಲ್ಲಿ ಒಬ್ಬರು. ಇವರ ಸಿನಿಮಾ ಎಂದರೆ ಅದು ಅಭಿಮಾನಿಗಳಿಗೆ ಹಬ್ಬದ ರೀತಿಯಲ್ಲಿ ಸಂಭ್ರಮ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಚಿತ್ರವು ಇದೇ ತಿಂಗಳು 29ರಂದು ರಂದು ಬಿಡುಗಡೆ ಆಗಲಿದೆ, ಈಗಾಗಲೇ ಚಿತ್ರದ ಪ್ರಮೋಶನ್‌ಗೆ ಸಂಬಂಧಪಟ್ಟು ಚಿತ್ರದ ಪೋಸ್ಟರ್, ಟ್ರೇಲರ್ ಬಿಡುಗಡೆಯಾಗಿ ಸಖತ್ ಕ್ರೇಜ್ ಸೃಷ್ಟಿಸಿದೆ. ಇದೀಗ ಚಿತ್ರತಂಡವು ಹೊಸದೊಂದು ಘೋಷಣೆ ಹೊರಡಿಸಿದೆ.

‘ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಆರಾಧನ ರಾಮ್ ಅಭಿನಯದ ‘ಕಾಟೇರ’ ಚಿತ್ರದ ಮೊದಲ ಗೀತೆ “ಪಸಂದಾಗವನೆ” ಇದೇ ಇಂದು ಮಧ್ಯಾಹ್ನ 12:30 ಕ್ಕೆ ನಿಮ್ಮ ಮುಂದೆ..’ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಬರೆದು ಹರಿಬಿಟ್ಟಿದೆ.

 

ಫ್ರೆಶ್ ನ್ಯೂಸ್

Latest Posts

Featured Videos