ದಕ್ಷಿಣ ಕಾಶಿ ಚಂದ್ರಗ್ರಹಣ

ದಕ್ಷಿಣ ಕಾಶಿ ಚಂದ್ರಗ್ರಹಣ

ನೆಲಮಂಗಲ, ಜು. 16 : ಇಂದು ಚಂದ್ರ ಗ್ರಹಣ ಹಿನ್ನೆಲೆ, ದಕ್ಷಿಣಕಾಶಿ ಶಿವಗಂಗೆ ಕ್ಷೇತ್ರದಲ್ಲಿ ಬೆಳಗ್ಗೆಯೇ ಎಂದಿನಂತೆ ಪೂಜೆ ಕೈಕಂರ್ಯ ಸಂಪನ್ನ, ಸಂಜೆ 7 ಗಂಟೆ ನಂತರ ಚಂದ್ರಗ್ರಹಣ ಆಚರಣೆ, ದರ್ಭೆಯಿಂದ ಶಿವನ ಲಿಂಗ ದಿಗ್ಬಂಧನ, ದೇವಾಲಯದ ಬಾಗಿಲುಬಂದ್.

ಪುರಾಣ ಪ್ರಸಿದ್ಧ ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಚಂದ್ರಗ್ರಹಣ ಆಚರಣೆ ಹಿನ್ನಲೆಯಲ್ಲಿ, ಇಂದು ಸಂಜೆ 7 ಗಂಟೆಯಿಂದ ಗಂಗಾಧರೇಶ್ವರನಿಗೆ ದರ್ಭೆಯಿಂದ ದಿಗ್ಬಂಧನ ಮತ್ತು ದೇವಾಲಯದ ಬಾಗಿಲು ಮುಚ್ಚುವರು. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆ ಕ್ಷೇತ್ರ.

ಪುರಾಣ ಪ್ರಸಿದ್ದಿ ಹೊನ್ನದೇವಿ ಹಾಗೂ ಸ್ವರ್ಣಾಂಭ ಸಮೇತ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಾಲಯವಾಗಿದೆ. ಇನ್ನೂ ಇಂದು ಬೆಳಗ್ಗೆ ಎಂದಿನಂತೆ ಪೂಜೆಗಳು ಸಂಜೆ ಏಳು ಗಂಟೆ ವರೆಗೆ ಭಕ್ತಾದಿಗಳಿಗೆ ದರ್ಶನದ ಅವಕಾಶ ಕಲ್ಪಿಸಲಾಗಿದೆ. ನಾಳೆ ಚಂದ್ರಗ್ರಹಣದ ನಂತರ ಎಂದಿನಂತೆ, ಬೆಳಗ್ಗೆ ಶಿವಲಿಂಗಕ್ಕೆ ಪುಣ್ಯಹ ಮಾಡಿ ಎಂದಿನಂತೆ ಅಭಿಷೇಕ ಪೂಜಾ ಕಾರ್ಯ ಜರುಗಲಿದೆ ಎಂದು ಶಿವಗಂಗೆ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos