ಕೆ.ಆರ್.ಪುರ: ವಿಶ್ವ ತಂಬಾಕು ರಹಿತ ದಿನಾಚರಣೆಯ

ಕೆ.ಆರ್.ಪುರ: ವಿಶ್ವ ತಂಬಾಕು ರಹಿತ ದಿನಾಚರಣೆಯ

ಬೆಂಗಳೂರು,(ಕೆ.ಆರ್.ಪುರ), ಮೇ. 31, ನ್ಯೂಸ್ ಎಕ್ಸ್ ಪ್ರೆಸ್: ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಬೆಂಗಳೂರು ಪೂರ್ವ ತಾಲ್ಲೂಕು ವ್ಯಾಪ್ತಿಯ ಕೆ.ಆರ್.ಪುರದ ಪ್ರಮುಖ ಬೀದಿಗಳಲ್ಲಿ ಎಸ್.ಇ.ಎ ಕಾಲೇಜ್ ವಿದ್ಯಾರ್ಥಿಗಳ ಸಹಕಾರದೊಂದಿಗೆ ಜನ ಜಾಗೃತಿ ಜಾತಕ್ಕೆ ಪೂರ್ವ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಡಾ.ಚಂದ್ರಶೇಖರ್ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ತಂಬಾಕು ಉತ್ಪನ್ನಗಳನ್ನು ಬಳಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಮಗ್ರ ಆರೋಗ್ಯ ಶಿಕ್ಷಣವನ್ನು ಸಾರ್ವಜನಿಕರಿಗೆ ನೀಡಿದರು.

ಸಮಾಜಕ್ಕೆ, ಕುಟುಂಬಕ್ಕೆ, ಪರಿಸರಕ್ಕೆ ತಂಬಾಕುನಿಂದ ಉಂಟಾಗುವ ಹಾನಿಯ ಬಗ್ಗೆ ತಿಳಿಸುವ ಸಲುವಾಗಿ ಪ್ರತೀ ಶನಿವಾರ ತಾಲ್ಲೂಕಿನ ಆರೋಗ್ಯ ನಿರೀಕ್ಷಕರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ತಂಬಾಕು ವಿರೋದಿ ಎನ್ಫೋರ್ಸ್ಮೆಂಟ್(ಜಾರಿಗೊಳಿಸಲು) ನಡೆಸಲು ಆದೇಶಿದರು.

ಇದೇ ಸಂದರ್ಭದಲ್ಲಿ ವೈದ್ಯ ತಜ್ಞರು ಡಾ.ರಾಮಕೃಷ್ಣಯ್ಯ, ಡಾ.ಸತ್ಯನಾರಾಯಣ, ತಾಲ್ಲೂಕಿನ ಆರೋಗ್ಯ ನಿರೀಕ್ಷರಾದ ರಾಜು, ಬಾಬು, ಗುರುರಾಜ್, ಶ್ರೀಶೈಲ, ಕೇಶವ ಸೇರಿದಂತೆ ಆಶಾ ಕಾರ್ಯಕರ್ತೆರು ಭಾಗವಹಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos