ನಮ್ಮ ಯೋಜನೆಗಳೇ ಚಂದ್ರಪ್ಪನ ಗೆಲುವಿಗೆ ಶ್ರೀ ರಕ್ಷೆ: ಕೆಹೆಚ್. ಮುನಿಯಪ್ಪ

ನಮ್ಮ ಯೋಜನೆಗಳೇ ಚಂದ್ರಪ್ಪನ ಗೆಲುವಿಗೆ ಶ್ರೀ ರಕ್ಷೆ: ಕೆಹೆಚ್. ಮುನಿಯಪ್ಪ

ಚಿತ್ರದುರ್ಗ: ಕಾಂಗ್ರೆಸ್ ಪಕ್ಷ ನನ್ನ ಮೇಲೆ ವಿಶ್ವಾಸ ವಿಟ್ಟು ಕೇಂದ್ರ ಸರ್ಕಾರದಲ್ಲಿ 10 ವರ್ಷಗಳ ಕಾಲ ಮಂತ್ರಿ ಮಾಡಿದೆ ರಾಜ್ಯ ಮಟ್ಟದಲ್ಲಿಯೂ ಸಚಿವನಾಗಿ ಕೆಲಸಮಾಡುತ್ತಿದ್ದೇನೆ. ಕೇವಲ ಸೀಟಿನ ವಿಷಯದಲ್ಲಿ ನನಗೆ ಯಾವುದೇ ಮುನಿಸಿಲ್ಲಾ ಕೋಲಾರ ಕ್ಷೇತ್ರ ಸೇರಿ 28 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ.

ಇಂದು ಚಿತ್ರದುರ್ಗ ನಗರದಲ್ಲಿ ಮಾದಿಗ ಸಮುದಾಯದ ಮುಖಂಡರ ಸಮಾವೇಶ ವನ್ನು ಏರ್ಪಡಿಸಿದ್ದು ಮಾನ್ಯ ಆಹಾರ ಸಚಿವರಾದ ಕೆ ಹೆಚ್. ಮುನಿಯಪ್ಪನವರು ಮಾಧ್ಯಮ ವನ್ನು ಉದ್ದೇಶಿಸಿ ಮಾತನಾಡಿದರು. ಚಂದ್ರಪ್ಪ ಸರಳ ಸಜ್ಜನಿಕೆ ರಾಜಕಾರಣಿ ಅವರು ಜನರ ಸಮಸ್ಯೆಗಳನ್ನು ಅರಿತಿರುವ ನಾಯಕ ಅವರನ್ನು ಅತಿಹೆಚ್ಚು ಮತಗಳಿಂದ ಗೆಲ್ಲಿಸಬೇಕೆಂದು ಜನರಲ್ಲಿ ಮನವಿ ಮಾಡಿದರು. ಭಾರತ ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಎಲ್ಲಾ ಧರ್ಮದ ನಾಯಕರ ಹೋರಾಟ ದಿಂದ ಸಾಧ್ಯವಾಯಿತು. ದೇಶದಲ್ಲಿ ಶಾಂತಿ ನೆಲೆಸಬೇಕು  ಧರ್ಮ ಧರ್ಮಗಳ ನಡುವೆ ಭಿನ್ನಾಭಿಪ್ರಾಯ ಗಳನ್ನು ಉಂಟು ಮಾಡಬಾರದು.

ಬಿಜೆಪಿ ಪಕ್ಷ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನವನ್ನು ಈ ದೇಶದಲ್ಲಿ ಬದಲಾವಣೆ ಮಾಡಬೇಕು ಎಂದು ಹೋರಟಿದೆ, ಬಿಜೆಪಿಯ ಹಲವಾರು ನಾಯಕರು ಸಂವಿಧಾನ ಬದಲಾವಣೆಯ ಮಾತುಗಳನ್ನು ಹೇಳುತ್ತಿದ್ದಾರೆ . ಈ ಸಂವಿಧಾನ ಉಳಿವಿಗಾಗಿ ಹಾಗೂ ದೇಶದ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು.

ಗಾಂಧೀಜಿಯವರ ರಾಮ ರಾಜ್ಯದ ಕನಸನ್ನು ಕಂಡಿದ್ದರು ಅದನ್ನ ನಾವು ನನಸು ಮಾಡಲು ನಾವೆಲ್ಲಾರು ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಸಾದ್ಯ. ನಾವು ಜನಸಾಮಾನ್ಯರಿಗೆ ನೀಡಿರುವ ಯೋಜನೆಗಳು ಕಾರ್ನಾಟಕ ರಾಜ್ಯದ ಸುಮಾರ 4.5 ಕೋಟಿ ಜನರಿಗೆ ತಲುಪಿದೆ. ಭಾರತದಲ್ಲಿ ಜನಸಾಮಾನ್ಯರಿಗೆ ಇಷ್ಟು ಯೋಜನೆಗಳನ್ನು ನೀಡಿರುವ ಮೊಟ್ಟ ಮೊದಲ ರಾಜ್ಯ ಕರ್ನಾಟಕ ಎಂದರು.

ಬಿಜೆಪಿಯವರು ಬರೀ ಅಧಿಕಾರದ ಆಸೆಗೆ ಅಷ್ಟೇ ಇವರು ಜನಸಾಮಾನ್ಯರ ಪರವಾಗಿದ್ದರೆ ಬರಪರಿಹಾರದ ಹಣವನ್ನು ನೀಡಬೇಕಿತ್ತು, ಇವರು ಎಲ್ಲಾ ವಿಷಯದಲ್ಲಿಯೂ ರಾಜಕೀಯ ಮಾಡುತ್ತಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್. ಆಂಜನೇಯ,ಓಶಂಕರ್,ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಾಜ್ ಪೀರ್,ಬಿಎಸ್ ಮಂಜುನಾಥ್, ಅಭ್ಯರ್ಥಿ ಬಿಎನ್ .ಚಂದ್ರಪ್ಪ ಹಾಗೂ ದಲಿತ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos