ಜೂನಿಯರ್ ರಾಕಿಬಾಯ್ ಬ್ರಹ್ಮಚಾರಿ ಅಡ್ಡಾಗೆ ಎಂಟ್ರಿ.!

ಜೂನಿಯರ್ ರಾಕಿಬಾಯ್ ಬ್ರಹ್ಮಚಾರಿ ಅಡ್ಡಾಗೆ ಎಂಟ್ರಿ.!

ಬೆಂಗಳರು, ಮೇ. 11, ನ್ಯೂಸ್ ಎಕ್ಸ್ ಪ್ರೆಸ್: ಕನ್ನಡ ಚಿತ್ರರಂಗದ ಕೆಜಿಎಫ್ ಸಿನಿಮಾ ಅಂದರೆ ಒಂದಷ್ಟು ಪಾತ್ರಗಳು ಮನಸ್ಸಿನಲ್ಲಿ ಹಾಗೇಯೇ ಅಚ್ಚುಳಿದು ಬಿಡುತ್ತವೆ. ಅದರಲ್ಲಿ ಜೂನಿಯರ್ ರಾಕಿ  ಪಾತ್ರವು ಕೂಡ ಒಂದು. ಆತನ ಹೆಸರು ಅನ್ಮೋಲ್. ಚಿಕ್ಕ ವಯಸ್ಸಿನಲ್ಲಿಯೇ ಎಂತಹ ನಟನೆಯಪ್ಪಾ ಎಂದು ನೋಡುಗರು ತಬ್ಬಿಬ್ಬು ಆಗಿದ್ದಂತೂ ಸತ್ಯ. ಅಷ್ಟರ ಮಟ್ಟಿಗೆ ಅಭಿನಯಿಸಿದ್ದಾನೆ ಅನ್ಮೋಲ್.

ಹೌದು, ಸದ್ಯಕ್ಕೆ ಅನ್ಮೋಲ್ ಬ್ರಹ್ಮಚಾರಿಯ ಗೆಟಪ್ಪಿನಲ್ಲಿರೋ ಸತೀಶ್ ಅವರ ಜೊತೆ ನಟಿಸೋ ಮೂಲಕ ಸುದ್ದಿಯಲ್ಲಿದ್ದಾನೆ. ಸತೀಶ್ ನಾಯಕನಾಗಿರೋ ಬ್ರಹ್ಮಚಾರಿ ಚಿಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಸೆಟ್ ನಲ್ಲಿ ಅನ್ಮೋಲ್ ಜೊತೆಗಿರೋ ಫೋಟೋವೊಂದನ್ನು ಸತೀಶ್ ನೀನಾಸಂ ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲರ ಜೊತೆ ಹಂಚಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos