ಜ್ಯೂಸ್ ಕುಡಿದ್ರೆ ಸಿಗರೇಟ್ ಬಿಡಬಹುದಂತೆ!

ಜ್ಯೂಸ್ ಕುಡಿದ್ರೆ ಸಿಗರೇಟ್  ಬಿಡಬಹುದಂತೆ!

ಥಾಯ್ಲೆಂಡ್, ಜ. 5 : ಮೆಡಿಸಿನ್ ವಿಭಾಗದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಸಿಗರೇಟ್​ ಸೇವನೆಯಿಂದ ಮುಕ್ತಿ ಪಡೆಯಲು ನಿಂಬೆ ಜ್ಯೂಸ್ ಪರಿಣಾಮಕಾರಿ ಎಂಬುದು ತಿಳಿದುಬಂದಿದೆ.

ಧೂಮಪಾನ ಆರೋಗ್ಯಕ್ಕೆ ಹಾಕಿಕಾರಕ ಎಂದು ಗೊತ್ತಿದ್ದರೂ ಅದನ್ನು ಬಿಡುವುದು ಅಷ್ಟೊಂದು ಸುಲಭವಲ್ಲ. ತಂಬಾಕಿನಲ್ಲಿರುವ ನಿಕೋಟಿನ್​ ಅಂಶ ನಮ್ಮನ್ನು ಸಿಗರೇಟಿಗೆ ದಾಸರನ್ನಾಗಿಸುತ್ತದೆ. ಈ ಚಟದಿಂದ ಮುಕ್ತಿ ಹೊಂದಲು ಅನೇಕರು ವಿಫಲ ಯತ್ನ ನಡೆಸುತ್ತಲೇ ಇರುತ್ತಾರೆ. ಕ್ಯಾನ್ಸರ್​ನಂತಹ ಮಾರಕ ಕಾಯಿಲೆಗೆ ಕಾರಣವಾಗುತ್ತಿರುವ ತಂಬಾಕು ಸೇವನೆಯಿಂದ ಮುಕ್ತಿ ಪಡೆಯಲು ಅನೇಕ ಚ್ಯುಯಿಂಗಮ್​ಗಳೂ ಸಹ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಆದರೆ ಇದನ್ನು ಬಳಸಿದರೂ ಫಲಿತಾಂಶ ಮಾತ್ರ ಶೂನ್ಯ ಎಂಬುದು ಧಮ್​ ಪ್ರಿಯರ ಮಾತು. ಆದರೀಗ ಧೂಮಪಾನವನ್ನು ತೊಡೆದು ಹಾಕುವುದು ಹೇಗೆ ಎಂಬುದರ ಬಗ್ಗೆ ಅಧ್ಯಯನವೊಂದನ್ನು ನಡೆಸಲಾಗಿದೆ. ಈ ಮಹತ್ತರ ಸಂಶೋಧನೆಯಿಂದ ನಿಂಬೆ ರಸವನ್ನು ಕುಡಿದರೆ ಸಿಗರೇಟಿಗೆ ಕಿಕ್ ಕೊಡಬಹುದು ಎಂದು ತಿಳಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos