ಮೂತ್ರ ಕುಡಿಸಿದ ಪಿಎಸ್ಐಗೆ ನ್ಯಾಯಾಂಗ ಬಂಧನ

ಮೂತ್ರ ಕುಡಿಸಿದ ಪಿಎಸ್ಐಗೆ ನ್ಯಾಯಾಂಗ ಬಂಧನ

ಚಿಕ್ಕಮಗಳೂರು: ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣದಲ್ಲಿ ಬಂಧಿಸಲಾಗಿರುವ ಪಿಎಸ್ಐ ಅರ್ಜುನ್ರನ್ನು ಸಿಐಡಿ ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿರು. ಆರೋಪಿಯನ್ನು ಚಿಕ್ಕಮಗಳೂರು ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.
ಪೊಲೀಸ್ ಕಸ್ಟಡಿಯಲ್ಲಿದ್ದ ಪರಿಶಿಷ್ಟ ಸಮುದಾಯದ ಯುವಕ ಪುನೀತ್ ಮೇಲೆ ದೌರ್ಜನ್ಯ ನಡೆಸಿದ, ಮೂತ್ರ ಕುಡಿಸಿದ ಆರೋಪ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ಐಯಾಗಿದ್ದ ಅರ್ಜುನ್ ಮೇಲಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಅರ್ಜುನ್ ನನ್ನು ಬಂಧಿಸಿದ್ದರು.

ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಚಿಕ್ಕಮಗಳೂರಿನ ಒಂದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಬುಧವಾರ ಬೆಂಗಳೂರಿನಲ್ಲಿ ಸಿಐಡಿ ಪೊಲೀಸರು ಅರ್ಜುನ್ ಬಂಧಿಸಿದ್ದರು. ಮೂಡಿಗೆರೆ ತಾಲೂಕಿನ ಕಿರಗುಂದದ ಯುವಕ ಕೆ. ಎಲ್. ಪುನೀತ್ ಮೇಲೆ ಗೋಣಿಬೀಡು ಠಾಣೆಯಲ್ಲಿ ದೌರ್ಜನ್ಯ ಎಸಗಲಾಗಿತ್ತು. ಮಹಿಳೆಗೆ ಕರೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪುನೀತ್ನನ್ನು ವಿಚಾರಣೆಗಾಗಿ ಠಾಣೆಗೆ ಅರ್ಜುನ್ ಕರೆದುಕೊಂಡು ಹೋಗಿದ್ದರು.

ಪೊಲೀಸ್ ಕಸ್ಟಡಿಯಲ್ಲಿ ಇರುವಾಗ ಪುನೀತ್ ಕುಡಿಯಲು ನೀರು ಕೇಳಿದಾಗ ಬಾಯಿಗೆ ಮೂತ್ರವನ್ನು ಹೊಯ್ಯಿಸಿದರು ಎಂಬುದು ಆರೋಪ. ಈ ಕುರಿತು ಪುನೀತ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos