“ಪತ್ರಕರ್ತರು ಅವರ ‘ಮನ್ ಕಿ ಬಾತ್’ ಬರೆದರೆ ಮೋದಿ ಏಟು ಕೊಡುತ್ತಾರೆ!?”

“ಪತ್ರಕರ್ತರು ಅವರ ‘ಮನ್ ಕಿ ಬಾತ್’ ಬರೆದರೆ ಮೋದಿ ಏಟು ಕೊಡುತ್ತಾರೆ!?”

ಅಮೇಥಿ, ಏ. 22, ನ್ಯೂಸ್ ಎಕ್ಸ್ ಪ್ರೆಸ್: ಪತ್ರಕರ್ತರು ತಮ್ಮ ಮನದ ಮಾತನ್ನು ಬರೆದುಬಿಟ್ಟರೆ, ಮೋದಿ, ಅವರಿಗೆ ಕೋಲು ತೆಗೆದುಕೊಂಡು ಹೊಡೆಯುತ್ತಾರೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು. ಉಮೇದುವಾರಿಕೆ ಸಲ್ಲಿಸಿರುವ ಅಮೇಥಿಯಲ್ಲಿ ಇಂದು ಬೃಹತ್ ಕಾಂಗ್ರೆಸ್ ಸಮಾವೇಶ ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು. ಈ ಸಮಯ ರಾಹುಲ್ ಗಾಂಧಿ ಚೌಕೀದಾರ್ ಎಂದರೆ ಜನ ‘ಚೋರ್‌ ಹೇ’ ಎಂದರು ಈ ಸಮಯ ಎದುರಿಗಿದ್ದ ಪತ್ರಕರ್ತರು ನಗುತ್ತಿದ್ದರು ಇದನ್ನು ಕಂಡು ರಾಹುಲ್ ಗಾಂಧಿ ಮೇಲಿನಂತೆ ಹೇಳಿದರು. ‘ಪರ್ತಕರ್ತರು ನಗುತ್ತಿದ್ದಾರೆ, ಅವರ ನಗುವಿಗೆ ಕಾರಣ ನಾನು ಹೇಳುತ್ತೇನೆ, ಪತ್ರಕರ್ತರು ತಮ್ಮ ಮನದ ಮಾತು ಬರೆದರೆ ಮೋದಿ ಎರಡು ಏಟು ಹೊಡೆಯುತ್ತಾರೆ, ಹಾಗಾಗಿ ಅವರು ಮೋದಿ ಅವರ ಮನದ ಮಾತನ್ನು ನಗುತ್ತಲೇ ವರದಿ ಮಾಡಬೇಕಾಗಿ ಬಂದಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಮುಂದುವರೆದು ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ‘ಚಿಂತೆ ಮಾಡಬೇಡಿ, 2019ರ ಚುನಾವಣೆ ನಂತರ ನೀವು ಭಯಬಿಟ್ಟು ನಿಮ್ಮ ವೃತ್ತಿ ಮಾಡಬಹುದಾಗಿರುತ್ತದೆ, ಆಗ ನಮ್ಮ ಬಗ್ಗೆಯೂ ಟೀಕೆ ಮಾಡುವ ಹಾಗಿದ್ದರೆ ಮಾಡಿ ಚಿಂತೆ ಇಲ್ಲ’ ಎಂದು ರಾಹುಲ್ ಗಾಂಧಿ ಹೇಳಿದರು. ಮೋದಿ ವಿರುದ್ಧ ಬರೆದರೆ ಅಥವಾ ವರದಿ ಮಾಡಿದರೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಅವರು ಹೇಳುವ ಯತ್ನವನ್ನು ತಮ್ಮ ಭಾಷಣದಲ್ಲಿ ಮಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos