ಹಿರಿಯ ಪತ್ರಕರ್ತ ವಿಜೇಶ್ ನಿಧನ

ಹಿರಿಯ ಪತ್ರಕರ್ತ ವಿಜೇಶ್ ನಿಧನ

ಬೆಂಗಳೂರು, ಜು. 25 : ಹಿರಿಯ ಪತ್ರಕರ್ತ ವಿಜೇಶ್ ಕಾಮತ್ (46 ವರ್ಷ) ಅವರು ನಿಧನರಾಗಿದ್ದಾರೆ. ಡೆಕ್ಕನ್ ಹೆರಾಲ್ಡ್ ಇಂಗ್ಲಿಷ್ ಪತ್ರಿಕೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ವಿಜೇಶ್ ಕಾಮತ್ ಇತ್ತೀಚೆಗೆ ಕೆಲವು ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.
ಅವಿವಾಹಿತರಾಗಿದ್ದ ವಿಜೇಶ್, ಬಹಳ ವರ್ಷಗಳ ಹಿಂದೆಯೇ ತಂದೆಯನ್ನು ಕಳೆದುಕೊಂಡಿದ್ದರು. ಅವರ ತಾಯಿ ಕೂಡಾ ಮೂರು ವರ್ಷಗಳ ಹಿಂದೆ ನಿಧನರಾಗಿದ್ದರು.

ತಂದೆ–ತಾಯಿಗೆ ವಿಜೇಶ್ ಕಾಮತ್ ಏಕಮಾತ್ರ ಪುತ್ರರಾಗಿದ್ದರು.ಇತ್ತೀಚೆಗೆ ಆರೋಗ್ಯ ಹದಗೆಟ್ಟಿದ್ದ ಹಿನ್ನಲೆ ನಗರದ ಫೋರ್ಟಿಸ್ ಆಸ್ಪತ್ರೆಯಲ್ಲಿಯೇ ನಿಧನರಾದ್ದರು. ಮೃತದೇಹ ಎಂಎಸ್ ರಾಮಯ್ಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಫ್ರೆಶ್ ನ್ಯೂಸ್

Latest Posts

Featured Videos