ರೈಲ್ವೆ ಇಲಾಖೆಯಲ್ಲಿ ಉದ್ಯೋಗ

  • In State
  • October 22, 2019
  • 194 Views
ರೈಲ್ವೆ ಇಲಾಖೆಯಲ್ಲಿ ಉದ್ಯೋಗ

ಹುಬ್ಬಳ್ಳಿ, ಅ. 22: ನೈರುತ್ಯ ರೈಲ್ವೆ ಇಲಾಖೆಯಿಂದ ಭರ್ಜರಿ ಸಿಹಿಸುದ್ದಿ ನೀಡಿದ್ದು, 386 ಕಮರ್ಷಿಯಲ್ ಕಂ ಟಿಕೆಟ್ ಕ್ಲರ್ಕ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 386 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಹಿರಿಯ ಕಮರ್ಷಿಯಲ್ ಕಂ ಟಿಕೆಟ್ ಕ್ಲರ್ಕ್ -160 ಹುದ್ದೆಗಳು, ಕಮರ್ಷಿಯಲ್ ಕಂ ಟಿಕೆಟ್ ಕ್ಲರ್ಕ್ -255 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ

ಹಿರಿಯ ಕಮರ್ಷಿಯಲ್ ಕಂ ಟಿಕೆಟ್ ಕ್ಲರ್ಕ್ ಹುದ್ದೆಗೆ ಅಂಗೀಕೃತ ವಿವಿಯಿಂದ ಯಾವುದೇ ಪದವಿಯನ್ನು ಪಡೆದಿರಬೇಕು.

ಕಮರ್ಷಿಯಲ್ ಕಂ ಟಿಕೆಟ್ ಕ್ಲರ್ಕ್ : ದ್ವಿತೀಯ ಪಿಯುಸಿಯಲ್ಲಿ ಶೇ. 50 ರಷ್ಟು ಅಂದಿಂದ ಉತ್ತೀರ್ಣರಾಗಿರಬೇಕು.

ವಯೋಮಿತಿ : ಸಾಮಾನ್ಯ ಅಭ್ಯರ್ಥಿಗಳು : 42 ವರ್ಷಗಳು, ಇತರೆ ಹಿಂದುಳಿದ ವರ್ಗ : 45 ವರ್ಷಗಳು, ಎಸ್ ಸಿ/ಎಸ್ ಟಿ : 47 ವರ್ಷಗಳು ಗರಿಷ್ಠ ವಯೋಮಿತಿ ಇದೆ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇರುವುದಿಲ್ಲಿ ಹೆಚ್ಚಿನ ಮಾಹಿತಿಗಾಗಿ ನೈರುತ್ಯ ರೈಲ್ವೆಯ ಅಧಿಕೃತ ವೆಬ್ ಸೈಟ್ http ://www.rrchubli.in ಗೆ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು.

ಆನ್ ಲೈನ್ ಅರ್ಜಿ ಸಲ್ಲಿಸಲು ನವೆಂಬರ್ 20 ಕೊನೆಯ ದಿನವಾಗಿದೆ. ಅಕ್ಟೋಬರ್ 23 ರಿಂದ ಅರ್ಜಿ ಸಲ್ಲಿಸಬಹುದು.

 

ಫ್ರೆಶ್ ನ್ಯೂಸ್

Latest Posts

Featured Videos