ತಂದೆಯಿಂದಲೇ ಜೀವ ಬೆದರಿಕೆ

ತಂದೆಯಿಂದಲೇ ಜೀವ ಬೆದರಿಕೆ

ಬರೇಲಿ, ಜು.11 : ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿ ತಂದೆಯಿಂದಲೇ ನಮಗೆ ಜೀವ ಬೆದರಿಕೆ ಇದೆ ಎಂದು ಯುವತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಬಿಥಾರಿ ಚೈನ್ಪುರ್ ಕ್ಷೇತ್ರದ ಬಿಜೆಪಿ ಶಾಸಕನ ಮಗಳು ಸಾಕ್ಷಿ ಮಿಶ್ರಾ (23 ವರ್ಷ) ಕಳೆದ ಗುರುವಾರ ಅಜಿತ್ ಕುಮಾರ್ (29 ವರ್ಷ) ಎಂಬ ದಲಿತ ಯುವಕನನ್ನು ಮದುವೆಯಾಗಿರುವುದಾಗಿ ತಿಳಿಸಿದ್ದಾರೆ.
ವಿಡಿಯೋ ಮಾಡಿರುವ ಯುವತಿ ಸಾಕ್ಷಿ ಮಿಶ್ರಾ, ‘ನಮ್ಮನ್ನು ಬಂಧಿಸುವುದಾಗಿ ಹಾಗೂ ಕೊಲ್ಲುವುದಾಗಿ ತಂದೆ, ಸಹೋದರ ಹಾಗೂ ಅವರ ಸಹವರ್ತಿಗಳು ಬೆದರಿಕೆ ಹಾಕುತ್ತಿದ್ದಾರೆ. ನಮಗೆ ರಕ್ಷಣೆ ಕೊಡಿ ಎಂದು ಬರೇಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾಳೆ. ಅಲ್ಲದೆ, ತಮ್ಮ ತಂದೆ ನೆರವು ನೀಡದೇ ಸಾಮಾನ್ಯ ಜೀವನ ನಡೆಸಲು ತಮಗೆ ನೆರವಾಗುವಂತೆ ಬರೇಲಿಯ ಸಂಸದರು ಹಾಗೂ ಶಾಸಕರಲ್ಲಿ ಸಾಕ್ಷಿ ಮನವಿ ಮಾಡಿಕೊಂಡಿದ್ದಾಳೆ.

ಫ್ರೆಶ್ ನ್ಯೂಸ್

Latest Posts

Featured Videos