ಜಿಲ್ಲಾಧಿಕಾರಿಯಿಂದ ಕಲ್ಯಾಣಿ ಸ್ವಚ್ಚತೆ

ಜಿಲ್ಲಾಧಿಕಾರಿಯಿಂದ ಕಲ್ಯಾಣಿ ಸ್ವಚ್ಚತೆ

ಬೆಂಗಳೂರು, ಜೂ. 22: ಜಿಲ್ಲಾಧಿಕಾರಿ ಎಂದರೆ ಸದಾ ಕಚೇರಿ ಕೆಲಸಗಳಲ್ಲಿ ಬ್ಯುಜಿಯಾಗಿರ್ತಾರೆ ಅಂತ ಎಲ್ಲರಿಗೂ ಗೊತ್ತು. ಅವರು ಬಿಡುವಾಗುವುದೇ ಅಪುರೂಪ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾಧಿಕಾರಿ ಕರಿಗೌಡ ಅವರು ಮಾತ್ರ ಕಚೇರಿ ಕೆಲಸಗಳ ಜೊತೆಗೆ ಸಮಾಜ ಸೇವೆಯಲ್ಲೂ ಮುಂಚೂಣಿಯಲ್ಲಿದ್ದಾರೆಂಬುದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಕೋರ್ಟ್ ರಸ್ತೆಯಲ್ಲಿರುವ ಇಂದು ಇತಿಹಾಸ ಪ್ರಸಿದ್ಧ ಕಲ್ಯಾಣಿಯನ್ನು ಸ್ವಚ್ಛ ಮಾಡಿ ಅದನ್ನು ಉಳಿಸಿವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಜಿಲ್ಲಾಧಿಕಾರಿ ಅವರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ನಗರದ ಪ್ರಮುಖರು, ಉಪವಿಭಾಗಾಧಿಕಾರಿ ಮಂಜುನಾಥ್, ಸಾರ್ವಜನಿಕರು ಕೈಜೋಡಿಸಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಕರಿಗೌಡರು ಕಲ್ಯಾಣಿ ಯನ್ನು ಪುನಶ್ಚೇತನ ಗೊಳಿಸಿದರೆ ಸುತ್ತಮುತ್ತಲು ಅಂತರ್ಜಲ ಮಟ್ಟ ಹೆಚ್ಚಾಗಿ ಬೋರ್ ಗಳಲ್ಲಿ ನೀರು ಲಭ್ಯವಾಗುತ್ತೆ. ಅಲ್ಲದೇ ಐತಿಹಾಸಿಕ ಸ್ಥಳಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.ಇದಕ್ಕೆ ಸಾರ್ವಜನಿಕರು ಕೈ ಜೋಡಿಸಿರುವುದು ಸ್ವಾಗತಾರ್ಹ.ಇನ್ನು ಮುಂದೆ ನಗರದಲ್ಲಿ 15 ದಿನಗಳಿಗೊಮ್ಮೆ ಇಂಥಹ ಸ್ಥಳಗಳನ್ನು ಗುರ್ತಿಸಿ ಸ್ವಚ್ಚಗೊಳಿಸಿ ಅಭಿವೃದ್ಧಿ ಪಡಿಸಲಾಗುವುದೆಂದು ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos