ಜಾನ್ಸನ್ ಆಂಡ್ ಜಾನ್ಸನ್ ಬೇಬಿ ಶ್ಯಾಂಪೂ ಸ್ಥಗಿತಕ್ಕೆ ಆದೇಶ

ಜಾನ್ಸನ್ ಆಂಡ್ ಜಾನ್ಸನ್ ಬೇಬಿ ಶ್ಯಾಂಪೂ ಸ್ಥಗಿತಕ್ಕೆ ಆದೇಶ

ನವದೆಹಲಿ, ಏ. 27, ನ್ಯೂಸ್ ಎಕ್ಸ್ ಪ್ರೆಸ್: ಜಾನ್ಸನ್ ಆಂಡ್ ಜಾನ್ಸನ್ ಬೇಬಿ ಶ್ಯಾಂಪೂ ಮಾರಾಟವನ್ನು ಸ್ಥಗಿತಗೊಳಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆಯನ್ನು ನೀಡಿದೆ. ಅಂಗಡಿಗಳಲ್ಲಿರುವ ಪ್ರೊಡಕ್ಟ್ ಗಳನ್ನು ತೆರವು ಮಾಡುವಂತೆ ಸೂಚನೆಯನ್ನು ತಿಳಿಸಲಾಗಿದೆ. ರಾಜಸ್ಥಾನದ ಜೌಷಧ ನಿಯಂತ್ರಕರ ಕಚೇರಿಯುವ ಜಾನ್ಸನ್ ಶ್ಯಾಂಪೂ ಮಾದರಿಯನ್ನು ಪರೀಕ್ಷಗೆ ಒಳಪಡಿಸಿತ್ತು. ಇದರಲ್ಲಿ ಅಪಾಯಕಾರಿಯಾದಂತಹ ಪದಾರ್ಥಗಳು ಇದ್ದು, ಇದು ಕಾನ್ಸರ್ ಗೆ ಕಾರಣವಾಗಬುಹುದು ಎಂದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಎನ್ ಸಿಪಿಸಿಆರ್ ಮುಂದಿನ ಆದೇಶ ಹೊರಡಿಸುವ ವರೆಗೂ ಮಾರಾಟವನ್ನು ನಿಷೇಧಿಸಲಾಗುವುದು ಎಂದು ತಿಳಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos