ನೆಲಕ್ಕುರುಳಿದ ಜೆಟ್ ವಿಮಾನ

ನೆಲಕ್ಕುರುಳಿದ ಜೆಟ್ ವಿಮಾನ

ಚಿತ್ರದುರ್ಗ, ಸೆ. 17: ಇಂದು ಮುಂಜಾನೆ ತಪಸ್ -04 ಎಡಿಇ ಹೆಸರಿನ ಮಾನವ ರಹಿತ ವಿಮಾನವನ್ನ ಪರಿಕ್ಷಾರ್ಥಕ್ಕಾಗಿ ಗಗನಕ್ಕೆ ಹಾರಿಸಲಾಗಿತ್ತು. ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ (DRDO) ಯ ಪರೀಕ್ಷಾರ್ಥ ಗಗನಕ್ಕೆ ಹಾರಿಸಿದ್ದ ಚಾಲಕ ರಹಿತ ಡ್ರೋನ್ (ರುಸ್ತುಂ) ಮಾದರಿಯ ವಿಮಾನ ನಿಯಂತ್ರಣ ಕಳೆದುಕೊಂಡು ಪತನವಾಗಿರುವ ಘಟನೆ ಚಿತ್ರದುರ್ಗ ಜಿಲ್ಲಿಯಲ್ಲಿ ನಡೆದಿದೆ.

ತಾಲ್ಲೂಕಿನ ಜೋಡಿ ಚಿಕ್ಕೇನಹಳ್ಳಿ ಗ್ರಾಮದ ಬಳಿ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ ಎನ್ನಲಾಗಿದೆ. ನಂತರ ಗ್ರಾಮದ ಮಂಜುನಾಥ್ ಎಂಬುವವರ ಅಡಿಕೆ ತೋಟದ ಜಮೀನಿನಲ್ಲಿ ನೆಲಕ್ಕೆ ಅಪ್ಪಳಿಸಿದೆ.

ವಿಮಾನ ಹಾರಾಟದ ದೃಷ್ಯವನ್ನ ನೋಡುತ್ತಿದ್ದ ಗ್ರಾಮಸ್ಥರು ಮೊಬೈಲ್ಗಳಲ್ಲಿ ವೀಡಿಯೋ ಮಾಡಿದ್ದು, ವಿಮಾನ ನಿಯಂತ್ರಣ ತಪ್ಪಿ ಪತನವಾಗುತ್ತಿರುವ ದೃಷ್ಯ ಮೊಬೈಲ್ ವೀಡಿಯೋದಲ್ಲಿ ಸೆರೆಯಾಗಿದೆ. ಇನ್ನೂ ವಿಮಾನ ಪತನವಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ನೋಡಿದ ಗ್ರಾಮಸ್ಥರು ವಿಮಾನದ ಬಳಿ ಹೋಗಲು ಹಿಂದೇಟು ಹಾಕಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos