ಸಿಕ್ಕ ಜೀವಂತ ಹಸುಗೂಸು!

ಸಿಕ್ಕ ಜೀವಂತ ಹಸುಗೂಸು!

ಬರೇಲಿ, ಅ. 14 : ಕೆಲವೊಮ್ಮೆ ಯಾರ ಹಣೆಬರಹ ಯಾವ ರೀತಿ ಇರುತ್ತೇ ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ ಮಗಳನ್ನು ಹೂಳಲು ಹೋದ ತಂದೆಗೆ ಅಚ್ಚರಿ. ಸತ್ತ ಮಗುವನ್ನು ಹೂಳಿದಾಗ ಪಕ್ಕದಲ್ಲೇ ಜೀವಂತ ಮಗುವೊಂದು ಸಿಕ್ಕಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರಪ್ರದೇಶದ ಹಿತೇಶ್ ಕುಮಾರ್ ಸಿರೋಹಿ ಎಂಬ ವ್ಯಾಪಾರಿ ಹೆಣ್ಣು ಮಗು ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿತ್ತು. ಮಗುವನ್ನು ಮಣ್ಣಿನಲ್ಲಿ ಹೂಳಿ ವಾಪಾಸ್ ಬರುವಾಗ ಅಲ್ಲಿಂದ 3 ಅಡಿ ದೂರದಲ್ಲಿ ಪೆಟ್ಟಿಗೆಯೊಂದು ಕಂಡಿತು. ಮಣ್ಣಿನಡಿಯಿಂದ ಆ ಪೆಟ್ಟಿಗೆ ಹೊರಗೆಳೆದ ಹಿತೇಶ್ ಕುಮಾರ್. 2 ಅಡಿ ಆಳದಲ್ಲಿ ಹೂಳಲಾಗಿದ್ದ ಪೆಟ್ಟಿಗೆಯಲ್ಲಿ ಹೆಣ್ಣುಮಗುವೊಂದು ಮಿಸುಕಾಡುತ್ತಾ ಮಲಗಿತ್ತು. ಹಿತೇಶ್ ತಕ್ಷಣ ಆ ಮಗುವನ್ನು ಎತ್ತಿಕೊಂಡು ಮನೆಗೆ ಕರೆತಂದಿದ್ದರು. ಮಗುವಿಗೆ ಹತ್ತಿಯ ಮೂಲಕ ಹಾಲು ಕುಡಿಸಿ ಮೈ ಸ್ವಚ್ಛಗೊಳಿಸಿದ್ದರು. ಸದ್ಯಕ್ಕೆ ಆ ಮಗುವನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos