ಜೀವ ಬಲಿಗೆ ಬಾಯ್ತೆರೆದು ಕಾದಿವೆ ಚರಂಡಿಗಳು!

ಜೀವ ಬಲಿಗೆ ಬಾಯ್ತೆರೆದು ಕಾದಿವೆ ಚರಂಡಿಗಳು!

ಬೆಂಗಳೂರು, ಆ. 14: ದಕ್ಷಿಣ ಮತ್ತು ಉತ್ತರ ಕರ್ನಾಟಕದಲ್ಲಿ ಉಂಟಾಗುರುವ ನೆರೆಯಿಂದಾಗಿ  ಭಯಾನಕ ಪರಿಸ್ಥಿತಿ ನಿರ್ಮಾಣ ವಾಗಿ ಇನ್ನೂ ಪರಿಹಾರ ಕಾರ್ಯಾಚರಣೆ ನಡೆಸಲು ಪರದಾಡುವಂತಾಗಿದೆ. ಇನ್ನೂ ಬೆಂಗಳೂರು ಮಹಾನಗದಲ್ಲಿ ಅಂತಹ ಮಳೆ ಬಂದರೆ ಹೇಗಪ್ಪಾ ಅನ್ನುವಂತಾಗಿದೆ. ಮಳೆಗಾಲದಲ್ಲಿ ನಾಗರೀಕರ ಮೃತ್ಯುವಿಗಾಗಿ ಬಾಯ್ತೆರೆದು ನಿಂತಿವೆ ಮ್ಯಾನ್ಹೋಲ್ ಗಳು ಮತ್ತು ಚರಂಡಿಗಳು ಹಾಗೂ ರಾಜಕಾಲುವೆಗಳು.

ಹನ್ನೆರಡು ವರ್ಷಗಳ ಅವದಿಯಲ್ಲಿ ಸಂಭವಿಸಿರುವ ಮಳೆ ಪ್ರಾವಹಕ್ಕೆ ಹದಿನಾಲ್ಕು ಜನರ ಪ್ರಾಣ ಕೊಚ್ಚಿ ಹೋಗಿದೆ. ರಾಜಕಾಲುವೆಗಳಿಗೆ ಸಮರ್ಪಕವಾಗಿ ತಡೆಗೋಡೆ ನಿರ್ಮಾಣ ಮಾಡದಿರುವುದು. ಚರಂಡಿಗಳನ್ನು ಮುಚ್ಚದೆ ಹಾಗೆ ಬಿಟ್ಟಿರುವುದು. ಮುಂಜಾಗ್ರತಾ ಕ್ರಮಗಳಿಲ್ಲದೆ ಇರುವುದು ಅವಘಡಗಳಿಗೆ ಕಾರಣವಾಗಿದೆ. ಹವಾಮಾನ ಇಲಾಖೆ ಮಳೆ ಬರುವ ಮುನ್ಸೂಚನೆ ನೀಡಿದೆ, ಆದರೂ ಬಿಬಿಎಂಪಿ ಇನ್ನೂ ಎಚ್ಚೆತ್ತುಕೊಳ್ಳದೆ ಮೀನಾ ಮೇಷ ಎಣಿಸುತ್ತಿದೆ. ಹವಾಮಾನ ಇಲಾಖೆಯ ಅಂದಾಜಿನಂತೆ ಮಳೆ ಬಂದರೆ ಜ‌ನ ಜೀವ ಬಿಗಿ ಹಿಡಿದು ಓಡಾಡುವಂತಹ ಪರಸ್ಥಿತಿ ಎದುರಿಸುತ್ತಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ನಗರದ ಹೊರ ವಲಯದಲ್ಲೇ ಹೆಚ್ಚು ಪ್ರವಾಕ್ಕೀಡಾಗಿರುವ ಘಟನೆಗಳು ನಡೆದಿವೆ. ಮಹದೇವಪುರ ವ್ಯಾಪ್ತಿಯೊಂದರಲ್ಲೇ 78 ಬಡಾವಣೆಗಳು ಪ್ರಾವಾಹ ಪೀಡಿತಕ್ಕೊಳಗಾಗಿ ಹಾನಿಗೊಳಗಾಗಿದ್ದವು. ಕೋರಮಂಗಲ ಮತ್ತು ಬೊಮ್ಮನಳ್ಳಿ ವ್ಯಾಪ್ತಿಯಲ್ಲಿ 60 ಕ್ಕೂ ಹೆಚ್ಚು ಭಾರಿ ಪ್ರವಾಹಕ್ಕೀಡಾಗಿ ‌ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿವೆ.

ರಸ್ತೆಯಲ್ಲಿನೀರು

ನೆರೆ ಸಂದರ್ಭಗಳಲ್ಲಿ ರಸ್ತೆ ಮೇಲೆ ನೀರು ಹರಿದು ಓಡಾಡಲಾಗದ 64 ರಸ್ತೆಗಳನ್ನು ಟ್ರಾಫಿಕ್ ಪೋಲಿಸರು ಬಿಬಿಎಂಪಿಗೆ ಪಟ್ಟಿ ಮಾಡಿ ಕೊಟ್ಟು ಪರ್ಯಾಯ ವ್ಯವಸ್ಥೆಗೆ ಮನವಿ ಮಾಡಿದ್ದರೂ  ಪ್ರಯೋಜನವಾಗಿಲ್ಲ. ಕೇವಲ 24 ಕಡೆಗಳಲ್ಲಿ ಮಾತ್ರ ಶಾಶ್ವತ ಪರಿಹಾರದಂತಕ್ರಮ ಕೈಗೊಂಡಿದೆ. ರಾಯಗಾಲುವೆಯ ತಾತ್ಕಾಲಿಕವಾಗಿ ಹೂಳು ತೆಗೆಯಲಾಗಿದೆ ಆದರೂ ಶಾಶ್ವತ ಪರಿಹಾರ ಕಲ್ಪಿಸಲಾಗಿಲ್ಲ.

ಕಿತ್ತೋಗಿವೆ ಬಂಡೆಗಳು

ಮಳೆಗಾಲದಲ್ಲಿ ಯಾವುದೆ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಕ್ಕೆ ಬಿಬಿಎಂಪಿ ಸದಾ ಸಜ್ಜಾಗಿದೆ ಎಂದು ಮೌಖಿಕವಾಗಿ ಹೇಳುತ್ತಿದೆ. ಲಗ್ಗೆರೆ, ಚಾಮರಾಜಪೇಟೆ, ಕೆ ಆರ್ ಮಾರುಕಟ್ಟೆ, ಯಶವಂತಪುರ, ಪೀಣ್ಯ, ಮತ್ತಿಕೆರೆ, ಪ್ರಕಾಶ್ ನಗರ,  ಸಿಲ್ಕ್ ಬೋಡ್೯ ರಸ್ತೆ ಗಳ ಬಡಾವಣೆಗಳ ಚರಂಡಿಗೆ ಅಳವಡಿಸಲಾಗಿರುವ ಕಲ್ಲು ಚಪ್ಪಡಿಗಳು ಕಿತ್ತು ಹೋಗಿ ಪಾದಾಚಾರಿಗಳು  ನಡೆದಾಡಲು ಸಾದ್ಯವಾಗುತ್ತಿಲ್ಲ. ಕನಿಷ್ಟ ಪಕ್ಷ ಇವುಗಳನ್ನು ಸರಿ ಪಡಿಸುವ ಗೋಜಿಗೂ ಹೋಗಿಲ್ಲ ಬಿಬಿಎಂಪಿ ಎಂದು ಪ್ರಕಾಶನಗರದ ವಾಸಿ ರಾಚೋಟಪ್ಪ ಅವರು ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಇಡಿ ಶಾಪ ಹಾಕಿದರು.

ನೆರೆಯಿಂದಾಗಿರುವ ದುರಂತಗಳು

2005 ಮಣಿವಣ್ಣನ್ ಮೋರಿಯಲ್ಲಿ ಬಿದ್ದು ಸಾವು. 2009 ಮೇ 23, ಪ್ರೇಜರ್ ಟೌನ್ ಬೈಕ್ ಸವಾರ ವೆಂಕಟೇಶ್ವರಲು ಮೋರಿಗೆ ಬಿದ್ದು ಸಾವು, ಜೂನ್ 2 ರಂದು ಚರಂಡಿಯಲ್ಲಿ ಕೊಚ್ಚಿ ಹೋದ ಆರು ವರ್ಷದ ಬಾಲಕ ಅಭಿಶೇಕ್,  2011 ಒಂದುವರೆ ವರ್ಷದ ಮಗು ವಿಜಯ್ ಮೋರಿಯಲ್ಲಿ ಕೊಚ್ಚಿ ಹೋದ ಘಟನೆ.

2013 ನಾಯಂಡನಹಳ್ಳಿ ಅಂಬೇಡ್ಕರ್ ಕಾಲೋನಿಯ ಕಿವುಡ ಅಂಗವಿಕಲ ಮಣಿಕಂಠ ರಾಯಗಾಲುವೆಯಲ್ಲಿ ಕೊಚ್ಚಿ ಹೋಗಿ ಸಾವು, ಡೇರಿ ವೃತ್ತದಲ್ಲಿ ಸಂಪಂಗಿರಾಮಿರೆಡ್ಡಿ ಮೋರಿಗೆ ಬಿದ್ದು ಸಾವು. 2014 ಸಂಕದಹಳ್ಳಿ ಸಮೀಪ ಬಿಬಿಎಂಪಿ ಗುಂಡಿಗೆ ಬಿದ್ದು ಸಹಚಿತ್ರನಟ ಅಶೋಕ್ ಸಾವು. ಬಿಳೆಕಲ್ಲಹಳ್ಳಿ ಮಹಾಲಕ್ಷ್ಮಿ ಮೋರಿಯಲ್ಲಿ  ಕೊಚ್ಚಿ ಹೋಗಿ ಮಡಿವಾಳ ಕೆರೆಯಲ್ಲಿ ಮೃತ ದೇಹವಾಗಿ ಪತ್ತೆ. ಮಾನ್ಯತಾ ಟೆಕ್ ಪಾಕ್೯ ಹಿಂಬಾಗದ ಕಾಲುವೆಯಲ್ಲಿ ಈಜಲು ಹೋಗಿ ಪ್ರಕಾಶ ಎಂಬಾತ ಸಾವು.

2017 ರಾಜಕಾಲುವೆಗೆ ತಡೆಗೋಡೆಯಿಲ್ಲದ್ದರಿಂದ ಉಲ್ಲಾಳು ಬಳಿ ರಾಕೇಶ್ ಕಾಲುವೆಗೆ ಬಿದ್ದು  ದುರ್ಮರಣ.

ರಾಜಕಾಲುವೆಯಲ್ಲಿ ಜೆಸಿಬಿ ಯಂತ್ರದಿಂದ ಹೂಳೆತ್ತುತ್ತಿದ್ದ ಚಾಲಕ ಆಯಾ ತಪ್ಪಿ ಶಾಂತಕುಮಾರ್ ಸಾವು. ಭಾರೀ ಮಳೆಯಿಂದಾಗಿ ಕುರುಬರಹಳ್ಳಿಯ ವೆಂಕಟೇಶ್ವರ ಕೃಪಾ ಕಾಲೋನಿಯ ರಾಜಕಾಲುವೆಯಲ್ಲಿ ಕೊಚ್ಚಿಹೋದ ಅರ್ಚಕ ವಾಸುದೇವ ಭಟ್ ಹಾಗೂ ನಿಂಗಮ್ಮ  ಮತ್ತು ಪುತ್ರಿ ಪುಷ್ಪಾ ಸಾವು .

ಫ್ರೆಶ್ ನ್ಯೂಸ್

Latest Posts

Featured Videos