ಖ್ಯಾತ ಅರ್ಥಶಾಸ್ತ್ರಜ್ಞ ಜೀನ್ ಡ್ರೀಝ್ ಬಂಧನ

ಖ್ಯಾತ ಅರ್ಥಶಾಸ್ತ್ರಜ್ಞ ಜೀನ್ ಡ್ರೀಝ್ ಬಂಧನ

ರಾಂಚಿ, ಮಾ.28, ನ್ಯೂಸ್ ಎಕ್ಸ್ ಪ್ರೆಸ್: ಇಂದು ಬೆಳಗ್ಗೆ ಪಶ್ಚಿಮ ಜಾರ್ಖಂಡ್ ನ ಪೊಲೀಸರು ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಶಿಕ್ಷಣ ತಜ್ಞ ಜೀನ್ ಡ್ರೀಝ್ ಅವರನ್ನು ಜಾರ್ಖಂಡ್ ನ ಗರ್ವಾ ಹೊರವಲಯದ ಪ್ರದೇಶದಿಂದ ಬಂಧಿಸಿದ್ದಾರೆ.

ಯುಪಿಎ ಆಡಳಿತದ ಸಂದರ್ಭದ ರಾಷ್ಟ್ರೀಯ ಸಲಹಾ ಮಂಡಳಿಯ ಭಾಗವಾಗಿದ್ದ ಜೀನ್ ಅವರು ಅಧಿಕಾರಿಗಳಿಂದ ಅನುಮತಿ ಪಡೆಯದೆ ಸಾರ್ವಜನಿಕ ಸಭೆ ನಡೆಸಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಜೀನ್ ಡ್ರೀಝ್ ಅವರ ಬಂಧನ ಸುದ್ದಿ ಕೇಳಿ ಆಘಾತ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ರೈತ ಹೋರಾಟಗಾರ ಹಾಗೂ ರಾಜಕೀಯ ನಾಯಕ ಯೋಗೇಂದ್ರ ಯಾದವ್, “ಜೀನ್ ಡ್ರೀಝ್ ಒಬ್ಬ ಸಂತ-ಅರ್ಥಶಾಸ್ತ್ರಜ್ಞರಾಗಿದ್ದಾರೆ, ನೋಬೆಲ್ ಪ್ರಶಸ್ತಿಗೆ ಅರ್ಹರಾಗಿರುವ ಅವರು ಕೊಳೆಗೇರಿಗಳಲ್ಲಿ ವಾಸವಾಗಿದ್ದವರು, ಯಾವುದೇ ಅರ್ಥಶಾಸ್ತ್ರಜ್ಞರಿಗಿಂತ ಹೆಚ್ಚು ಬಡವರಿಗಾಗಿ ಅವರು ಶ್ರಮಿಸಿದ್ದಾರೆ.

ಎಲ್ಲಾ ಅಧಿಕಾರ ತ್ಯಜಿಸಿ ಭಾರತದ ಪೌರತ್ವವನ್ನು ಪಡೆದವರು ಅವರು. ಅವರನ್ನು ಬಂಧಿಸುವುದಕ್ಕಿಂತ ಹೆಚ್ಚು ನಾಚಿಕೆಗೇಡು ಯಾವುದೂ ಇಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಡ್ರೀಝ್ ಆಹಾರದ ಹಕ್ಕಿಗಾಗಿ ಸಾಕಷ್ಟು ಹೋರಾಟ ನಡೆಸಿದವರು.

 

ಫ್ರೆಶ್ ನ್ಯೂಸ್

Latest Posts

Featured Videos