ಇಂದು ಎಚ್. ವಿಶ್ವನಾಥ್ ರ ನಿರ್ಧಾರ ಏನು?

ಇಂದು ಎಚ್. ವಿಶ್ವನಾಥ್ ರ ನಿರ್ಧಾರ ಏನು?

ಬೆಂಗಳೂರು, ಜೂ. 20: ತೀವ್ರ ಕುತೂಹಲ ಮೂಡಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಕ್ಲೈಮ್ಯಾಕ್ಸ್ ಸೀನ್ ಇಂದು ನಡೆಯಲಿದೆ. ರಾಜೀನಾಮೆ ನಿರ್ಧಾರದ ಬಗ್ಗೆ ಅಲೋಚನೆ ಮಾಡಿ ನಿರ್ಧಾರ ತಿಳಿಸಿ ಎಂದಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಇಂದು ತಮ್ಮ ನಿರ್ಧಾರವನ್ನು ಎಚ್. ವಿಶ್ವನಾಥ್ ತಿಳಿಸಲಿದ್ದಾರೆ.

ತಮ್ಮ ನಿವಾಸದಲ್ಲಿ ಸುದೀರ್ಘ ಮಾತುಕತೆ ಬಳಿಕವೂ ವಿಶ್ವನಾಥ್ ರಾಜೀನಾಮೆ ವಾಪಸ್ ಪಡೆಯೋ ನಿರ್ಧಾರ ಮಾಡಿರಲಿಲ್ಲ. ಈ ವೇಳೆ ಗುರುವಾರದವರೆಗೆ ಯೋಚನೆ ಮಾಡಿ ತಮ್ಮ ನಿರ್ಧಾರ ತಿಳಿಸಿ ಎಂದು ದೇವೇಗೌಡರು ಹೇಳಿದ್ದರು. ಇಂದು ಸ್ವತಃ ದೇವೇಗೌಡರನ್ನ ಭೇಟಿಯಾಗಲಿರುವ ವಿಶ್ವನಾಥ್, ತಮ್ಮ ನಿರ್ಧಾರ ತಿಳಿಸಲಿದ್ದಾರೆ. ದೇವೇಗೌಡರ ಮಾತಿಗೆ ಮಣಿದು ರಾಜೀನಾಮೆ ವಾಪಸ್ ಪಡೆಯುತ್ತಾರಾ ಅಥವಾ ತಮ್ಮ ರಾಜೀನಾಮೆ ನಿರ್ಧಾರಕ್ಕೆ ಬದ್ಧರಾಗಿರುತ್ತಾರಾ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಇದೇ ವೇಳೆ ಇಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ಮಹತ್ವದ ಸುದ್ದಿಗೋಷ್ಟಿ ಕರೆದಿದ್ದು, ಕುತೂಹಲಕ್ಕೆ ಕಾರಣವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos