ಜೆಡಿಎಸ್ ಮುಖಂಡನಿಂದ ಸ್ವಾತಂತ್ರ ಹೋರಾಗಾರನ ಜಮೀನು ಕಬಳಿಕೆ ಆರೋಪ

ಜೆಡಿಎಸ್ ಮುಖಂಡನಿಂದ ಸ್ವಾತಂತ್ರ ಹೋರಾಗಾರನ ಜಮೀನು ಕಬಳಿಕೆ ಆರೋಪ

ಬೆಂಗಳೂರು, ಜು. 6 : ನಗರದ ದೇವನಹಳ್ಳಿಯಲ್ಲಿ ಆತ ಸ್ವಾತಂತ್ರ ಹೋರಾಟಗಾರ, ಇದೀಗ 86 ವರ್ಷ ವಯಸ್ಸು… ತನ್ನ ದುಡಿಮೆಯಲ್ಲಿ ಅಷ್ಟೋ ಇಷ್ಟೋ ಜಮೀನು ಖರೀದಿ ಮಾಡಿದ್ದ. ಆದ್ರೆ ಇದೀಗ ಖರೀದಿ ಮಾಡಿದ್ದ ಜಮೀನಿಗೆ ಜೆಡಿಎಸ್ ಮುಖಂಡನೊಬ್ಬ ಕೇಸ್ ಹಾಕಿಕೊಂಡು ಅಕ್ರಮವಾಗಿ ತನ್ನ ಹೆಸರಿಗೆ ಪಹಣಿ ಮಾಡಿಸಿಕೊಂಡ ಆರೋಪ ಕೇಳಿ ಬಂದಿದೆ. ಇನ್ನೂ ತಾನು ತೆಗೆದುಕೊಂಡಿರುವ ಜಮೀನು ಉಳಿಸಿಕೊಳ್ಳಲು ಇಳಿ ವಯಸ್ಸಿನಲ್ಲಿ ಸ್ವಾತಂತ್ರ ಹೋರಾಟಗಾರ ಸರ್ಕಾರಿ ಕಛೇರಿಗಳನ್ನ ಸುತ್ತುತ್ತಿದ್ದು… ಯಾರು ರಕ್ಷಣೆ ನೀಡ್ತಿಲ್ಲ ಅಂತಾ ಅಳಲನ್ನ ವ್ಯಕ್ತಪಡಿಸಿದ್ದಾನೆ.

ನಡೆಯಲು ಸಾಧ್ಯವಾಗದಿದ್ರು ತಾನು ತೆಗೆದುಕೊಂಡಿರೋ ಜಮೀನು ಬಳಿ ನಿಂತು ಪೊಲೀಸರು ರಕ್ಷಣೆ ನೀಡುವಂತೆ ಮನವಿ ಮಾಡ್ತಿರೋ ಸ್ವಾತಂತ್ರ ಹೋರಾಟಗಾರ. ಸ್ವಾಧೀನದಲ್ಲಿದ್ದು, ಆದೇಶ ಮಾಡಿಸಿಕೊಂಡು ಬಂದ್ರು ನಮಗೆ ಬೆದರಿಕೆ, ಕಿರುಕುಳ ನೀಡ್ತಿದ್ದಾರೆ ಅಂತಾ ಅಳಲನ್ನ ವ್ಯಕ್ತಪಡಿಸ್ತಿರೋ ಮಗಳು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ. ಅಂದಹಾಗೆ ಗ್ರಾಮದಲ್ಲಿ ಸ್ವಾತಂತ್ರ ಹೋರಾಟಗಾರ ಈ ಪುಷ್ಪರಾಜ್ ಎಂಬುವವರು ಸರ್ವೆನಂ 362 ರಲ್ಲಿ ಶ್ರೀರಾಮಪ್ಪ ಎಂಬುವವರ ಕಡೆಯಿಂದ 20 ಗುಂಟೆ ಜಮೀನನ್ನ ತಮ್ಮ ಸಂಪಾದನೆಯ ಉಳಿತಾಯದಲ್ಲಿ 8 ವರ್ಷಗಳ ಹಿಂದೆ ಖರೀದಿ ಮಾಡಿದ್ದಾರೆ. ಅದರಂತೆ ಪಹಣಿ, ಮ್ಯೂಟೆಷನ್ ಎಲ್ಲವೂ ಬದಲಾಗಿತ್ತು. ಆದ್ರೆ ಇದೀಗ ಅದೇ ಗ್ರಾಮದ ಜೆಡಿಎಸ್ ಮುಖಂಡ ಆನಂದ್ ಎಂಬುವವರು ಪುಷ್ಪರಾಜ್ ಖರೀದಿ ಮಾಡಿರೋ 20 ಗುಂಟೆ ಜಮೀನನ್ನ ಅಕ್ರಮವಾಗಿ ಎಸಿ ಬಳಿ ತನ್ನ ಹೆಸರಿಗೆ ಮಾಡಿಸಿಕೊಂಡು ಕಿರುಕುಳ ನೀಡುತ್ತಿದ್ದಾನಂತೆ. ಹೀಗಾಗಿ ಡಿಸಿ ಕೋರ್ಟ್ಗೆ ಅಪೀಲು ಹೋಗಿರೋ ಸ್ವಾತಂತ್ರ ಹೋರಾಟಗಾರ ತಡಯಾಜ್ನೆ ತಂದಿದ್ದಾರಂತೆ. ಆದ್ರೆ ಸ್ವಾದೀನದಲ್ಲಿದ್ದು, ಬೆಳೆ ಹಿಡಲು ಹೋದ್ರೆ ಇದಕ್ಕೂ ಬಿಡದೇ ಆನಂದ್ ಬೆದರಿಕೆ ಹಾಕ್ತಿದ್ದು, ಪೊಲೀಸರು ರಕ್ಷಣೆ ನೀಡುವಂತೆ ಹೋದ್ರು ನ್ಯಾಯ ಕೋಡ್ತಿಲ್ಲ ಅಂತಾ ನೊಂದ ಪುಷ್ಪರಾಜ್ ಆರೋಪಿಸಿದ್ದಾರೆ.

ಅಂದಹಾಗೆ ಪುಷ್ಪರಾಜ್ 8 ವರ್ಷಗಳಿಂದೆ ಈ ಜಮೀನು ಖರೀದಿ ಮಾಡಿ ತಾನೇ ಅನುಭವದಲ್ಲಿದ್ದಾರೆ. ಆದ್ರೆ ಇದೀಗ ಆನಂದ್ ಹೆಸರಿನಲ್ಲಿ ಪಹಣಿ ಬರ್ತಿದ್ದು ಕೋರ್ಟ್ನಲ್ಲಿ ಧಾವೆ ಹೂಡಿದ್ದಾರೆ. ಜತೆಗೆ ಡಿಸಿ ನೀವು ಸ್ವಾಧೀನದಲ್ಲಿ ಕೆಲಸ ಮಾಡಿಕೊಳ್ಳಬಹುದು ಎಂದ್ರು ಆನಂದ್ ಬಿಡುತ್ತಿಲ್ಲವಂತೆ. ಹೀಗಾಗಿ ಪ್ರತಿನಿತ್ಯ ರಕ್ಷಣೆಗಾಗಿ ದೊಡ್ಡಬಳ್ಳಾಫುರ ಗ್ರಾಮಾಂತರ ಪೊಲೀಸರ ನರವನ್ನ ಕೋರಿದ್ರು ಅವರು ಸಹ ಬರ್ತಿಲ್ಲವಂತೆ. ತಾನು ಸಂಪಾದನೆ ಮಾಡಿ ಖರೀದಿಸಿರೋ ಜಾಗವನ್ನ ನಮಗೆ ಉಳಿಸಿಕೊಡಿ ಅಂತಾ ಸ್ವಾತಂತ್ರ ಹೋರಾಟಗಾರ ಪುಷ್ಪರಾಜ್ ಮನವಿ ಮಾಡಿಕೊಂಡಿದ್ದಾರೆ.

ಒಟ್ಟಾರೇ ಸ್ವಾತಂತ್ರ ಹೋರಾಟಗಾರರೊಬ್ಬ ತಾನು ಖರೀದಿ ಮಾಡಿದ್ದ ಜಮೀನನ್ನ ಉಳಿಸಿಕೊಳ್ಳಲು ಹಗಲು ರಾತ್ರಿ ಹೋರಾಟ ನಡೆಸ್ತಿದ್ರು, ಯಾವೊಬ್ಬ ಅಧಿಕಾರಿಗಳು ಸರಿಯಾಗಿ ಸ್ಪಂಧನೆ ಮಾಡದೇ ಇರೊದು ನಿಜಕ್ಕೂ ವಿಪರ್ಯಾಸ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಈ ಜಮೀನು ಪ್ರಕರಣದ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಈ ಆಸ್ತಿ ನಮ್ಮ ತಾತನದ್ದಾಗಿದ್ದು ನನಗೆ ಸೇರಬೇಕು. ಈ ಹಿಂದೆ ಈ ಭೂಮಿ ಸರ್ಕಾರದಿಂದ ನಮಗೆ ಗ್ರಾಂಟ್ ಆಗಿದ್ದು, ಎಸ್‌ಸಿ ಎಸ್‌ಟಿ ನಿಯಮದ ಪ್ರಕಾರಗಳನ್ನ ಗಾಳಿಗೆ ತೂರಿ ಮಾರಾಟ ಮಾಡಲಾಗಿತ್ತು. ಅದರಂತೆ ಎಸಿ ಕೋರ್ಟ್ಗೆ ಹೋಗಿ ನಾನು ನನ್ನ ಹೆಸರಿಗೆ ಆದೇಶ ಮಾಡಿಸಿಕೊಂಡಿದ್ದೇನೆ. ಅಸಲಿಗೆ ಗ್ರಾಂಟ್ ಜಮೀನು ಮಾರಾಟ ಮಾಡಲು ಬರೋದೆ ಇಲ್ಲ. ಈ ಬಗ್ಗೆ ಎಲ್ಲರ ಅಭಿಪ್ರಾಯ ಪಡೆದು ಖರೀಸಬೇಕು. ನಾನು ಯಾವುದೇ ಅಕ್ರಮ ಮಾಡಿಲ್ಲ ಎಂದು ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos