ಜಯಪ್ರದಾ ಬಗ್ಗೆ ಕೀಳು ಹೇಳಿಕೆ ನೀಡಿದ: ಅಜಂ ಖಾನ್

ಜಯಪ್ರದಾ ಬಗ್ಗೆ ಕೀಳು ಹೇಳಿಕೆ ನೀಡಿದ: ಅಜಂ ಖಾನ್

ನವದೆಹಲಿ, . 15, ನ್ಯೂಸ್ ಎಕ್ಸ್ ಪ್ರೆಸ್:  ಉತ್ತರಪ್ರದೇಶದಲ್ಲಿ ರೇಪ್ ಹೆಚ್ಚಿದರ ಬಗ್ಗೆ ಪ್ರಶ್ನೆ ಕೇಳಿದಾಗ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಹುಡುಗರು ಹುಡುಗ್ರಾಗಿರ್ತಾರೆ. ಅವರು ತಪ್ಪು ಮಾಡಿದರೆ ಅದೇನು ದೊಡ್ಡ ವಿಷಯ ಅಲ್ಲ (ಲಡಕೆ ಲಡಕೆ ಹೋತೆ ಹೈ, ಲಡಕೆಸೆ ಗಲತಿ ಹೋತಿ ಹೈ) ಅಂತಾ ಅತ್ಯಾಚಾರಿಗಳ ಪರ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದರು. ಈಗ ಅದೇ ಹಾದಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಮಾಜವಾದಿ ಪಕ್ಷದ ಲೋಕಸಭೆ ಅಭ್ಯರ್ಥಿ ಅಜಂ ಖಾನ್, ನಟಿ ಹಾಗೂ ತಮ್ಮ ಎದುರಾಳಿ ಬಿಜೆಪಿ ಅಭ್ಯರ್ಥಿ ಜಯಪ್ರದಾ ವಿರುದ್ಧ ಅತ್ಯಂತ ಕೀಳು ಮಟ್ಟದಲ್ಲಿ ನಾಲಿಗೆ ಹರಿಬಿಟ್ಟಿದ್ದಾರೆ.

ರಾಂಪುರದಲ್ಲಿ ತಮ್ಮ ಪ್ರತಿಸ್ಪರ್ಧಿ ಜಯಪ್ರದಾ ಬಗ್ಗೆ ಮಾತನಾಡುವ ವೇಳೆ ಬಳಸಿದ ಪದವೊಂದು ಇದೀಗ ಅವರನ್ನೇ ಮುಜುಗರಕ್ಕೀಡು ಮಾಡಿದೆ.  ಮನಬಂದಂತೇ ಮಾತಿನ ಭರದಲ್ಲಿ ಹೇಳಿದ ಆ ಹೇಳಿಕೆ ಇದೀಗ ವೈರಲ್ ಆಗಿದ್ದು, ಅಜಂ ಖಾನ್ ರನ್ನು  ಪಕ್ಷದಿಂದಲೇ ವಜಾಮಾಡಬೇಕೆಂಬ ಭಾರೀ ಒತ್ತಾಯ ಕೇಳಿಬಂದಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಜಂ ಖಾನ್‌, 17 ವರ್ಷಗಳ ಹಿಂದೆ ನಾನು ಜಯಪ್ರದಾರನ್ನು ಈ ಕ್ಷೇತ್ರಕ್ಕೆ ಕರೆತಂದಿದ್ದೆ. ಇಷ್ಟು ವರ್ಷ ಯಾರಿಗೂ ಆಕೆಯನ್ನು ಮುಟ್ಟಲು ಬಿಟ್ಟಿರಲಿಲ್ಲ. ಆದರೆ 17 ದಿನಗಳ ಹಿಂದೆ ಆಕೆ ಖಾಕಿ ಒಳವಸ್ತ್ರ ತೊಟ್ಟಿದ್ದು ಗೊತ್ತಾಯ್ತು ಎಂದಿದ್ದಾರೆ. ಈ ಮಾತಿಗೆ ಜಯಪ್ರದಾ ಅಭಿಮಾನಿಗಳಷ್ಟೇ ಅಲ್ಲಾ, ಅನೇಕರು ಅಜಂ ಖಾನ್ ರ್ನನು ವಿರೋಧಿಸುತ್ತಿದ್ದಾರೆ. ಅಜಂ ಖಾನ್ ಬಿಜೆಪಿಗೆ ಸೇರಿರುವುದರ ಬಗ್ಗೆ ವ್ಯಂಗ್ಯವಾಗಿ ಮಾತನಾಡುವಾಗಈ ಪದ ಬಳಕೆ ಮಾಡಿದ್ದಾರೆ. ಇವರ ಹೇಳಿಕೆ ಹರಡುತ್ತಿದ್ದಂತೇ ಸಾಮಾಜಿಕ ಜಾಲತಾಣಗಳಲ್ಲಿ ಇವರ ಬಗ್ಗೆ ಅನೇಕ ವಿರೋಧಗಳು ಖೇಳಿ ಬಂದವು. ಇಂತಹ ಅಸಹ್ಯ ವ್ಯಕ್ತಿ ಪಕ್ಷದಲ್ಲಿರಬೇಕೆ.? ಮೊದಲು ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಲು ಹೇಳಿ ಎಂದು ಸಾಮಾಜಿಕ ಜಾಲತಾಣಗಲಲ್ಲಿ ಅಜಂ ಖಾನ್ ವಿರುದ್ಧ ಟೀಕೆಗಳು ಹೆಚ್ಚಾಗಿವೆ.

ಫ್ರೆಶ್ ನ್ಯೂಸ್

Latest Posts

Featured Videos