ಜನರ ಕಲ್ಯಾಣಕ್ಕೆ ಜಯ ಲಲಿತಾ ಆಸ್ತಿ !?

ಜನರ ಕಲ್ಯಾಣಕ್ಕೆ ಜಯ ಲಲಿತಾ ಆಸ್ತಿ !?

ಚೆನ್ನೈ, ಆ. 31 : ತಮಿಳುನಾಡು ಮಾಜಿ ಸಿಎಂ ಜೆ.ಜಯಲಲಿತಾ ಯಾವಾಗಲೂ ಜನರು ತಮ್ಮನ್ನು ತಮಿಳುನಾಡಿನ ಸಿಎಂ ಮಾಡಿದ್ದಾರೆ ಎಂದು ಹೇಳುತ್ತಿದ್ದರು. ತಾನೆಂದಿಗೂ ಅವರಿಗಾಗಿ ಕೆಲಸ ಮಾಡಿದ್ದರು. ಮಾಜಿ ಸಿಎಂ ಆಸ್ತಿಯ ಕೆಲ ಭಾಗವನ್ನು ಸಾರ್ವಜನಿಕರಿಗಾಗಿ ಏಕೆ ವೆಚ್ಚ ಮಾಡಬಾರದು ಎಂದು ಮದ್ರಾಸ್ ಹೈಕೋರ್ಟ್ ಪ್ರಶ್ನಿಸಿದೆ.
ಮಾಜಿ ಸಿಎಂ ಆಸ್ತಿಗಳ ಅಧಿಕೃತ ನಿರ್ವಾಹಕರ ನೇಮಕವಾಗಬೇಕೆಂದು ಕೋರಿ ಎಐಎಡಿಎಂಕೆ ಕಾರ್ಯಕರ್ತರು ಕೋರ್ಟ್ ಗೆ ಸಲ್ಲಿಸಿದ್ದ ಮನವಿಯನ್ನು ಆಲಿಸಿದಾಗ ನ್ಯಾಯಮೂರ್ತಿಗಳಾದ ಎನ್ ಕಿರುಬಕಾರನ್ ಮತ್ತು ಅಬ್ದುಲ್ ಖುದೋಸ್ ಅವರ ವಿಭಾಗೀಯ ಪೀಠ ಈ ಮೌಖಿಕ ಹೇಳಿಕೆ ನೀಡಿದೆ. ನ್ಯಾಯಪೀಠದ ನಿರ್ದೇಶನದಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಜಯಲಲಿತಾ ಅವರ ಸೋದರ ಸೊಸೆ ಜೆ ದೀಪ ಮತ್ತು ಸೋದರಳಿಯ ಜೆ ದೀಪಕ್, ಇದು ಅವರ ಚಿಕ್ಕಮ್ಮನ ಆಶಯವಾದ್ದರಿಂದ ಈ ವಿಚಾರಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದರು. ಆದರೆ ಜಯಲಲಿತಾ ಅವರ ಏಕೈಕ ಕಾನೂನು ಉತ್ತರಾಧಿಕಾರಿಗಳಾಗಿ, ಅವರು ಜಯಲಲಿತಾ ಅವರ ಆಸ್ತಿಗಳಿಗೆ ಅರ್ಹ ವಾರಸುದಾರರಾಗಿದ್ದಾರೆ ಎಂದು ಅವರುಗಳು ಅಭಿಪ್ರಾಯಪಟ್ಟರು.

ಫ್ರೆಶ್ ನ್ಯೂಸ್

Latest Posts

Featured Videos