‘ಜವಾನ್’ ಚಿತ್ರ ಮೊದಲ ವಾರದ ಕಲೆಕ್ಷನ್ ಎಷ್ಟು ಗೊತ್ತಾ!

‘ಜವಾನ್’ ಚಿತ್ರ ಮೊದಲ ವಾರದ ಕಲೆಕ್ಷನ್ ಎಷ್ಟು ಗೊತ್ತಾ!

ಬೆಂಗಳೂರು: ನಮ್ಮ ಭಾರತ ಚಿತ್ರರಂಗದಲ್ಲಿ ಬಾಲಿವುಡ್ ಸಿನಿಮಾಗಳು ಅತ್ಯಂತ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ ಅದೇ ತರ ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾ ಅತ್ಯಂತ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ
ನಟ ಶಾರುಖ್ ಖಾನ್ ಅವರು ಸೂಪರ್ ಸಕ್ಸಸ್ ಕಂಡಿದ್ದಾರೆ. ‘ಪಠಾಣ್’ ಸಿನಿಮಾದಿಂದ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದ್ದ ಅವರು ಈಗ ಮತ್ತೊಮ್ಮೆ ‘ಜವಾನ್’ ಚಿತ್ರದಿಂದ ಯಶಸ್ಸು ಕಂಡಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಅಬ್ಬರಿಸುತ್ತಿದೆ. ಪ್ರತಿ ದಿನವೂ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತ ಮುನ್ನುಗ್ಗುತ್ತಿದೆ. ‘ಜವಾನ್’ ತೆರೆಕಂಡು ಒಂದು ವಾರ ಕಳೆದಿದೆ. 7 ದಿನದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಈ ಸಿನಿಮಾಗೆ ಬರೋಬ್ಬರಿ 386 ಕೋಟಿ ರೂಪಾಯಿ ಗಳಿಕೆ ಆಗಿದೆ. ಇದರಿಂದ ಶಾರುಖ್ ಖಾನ್ ಮುಖದಲ್ಲಿ ನಗು ಮೂಡಿದೆ. ಅವರ ಮುಂಬರುವ ಸಿನಿಮಾಗಳ ಮೇಲೆ ಜನರು ದೊಡ್ಡ ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ. ನಿರ್ದೇಶಕ ಅಟ್ಲಿ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿದೆ.
‘ಜವಾನ್’ ಸಿನಿಮಾದಲ್ಲಿ ಶಾರುಖ್ ಖಾನ್ ಅವರು ಆ್ಯಕ್ಷನ್ ಹೀರೋ ಆಗಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಅವರ ಮಾಡಿರುವ ದ್ವಿಪಾತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಅವರ ಜೊತೆ ನಟಿಸಿರುವ ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ನಯನತಾರಾ, ಸಾನ್ಯಾ ಮಲ್ಹೋತ್ರಾ, ಪ್ರಿಯಾಮಣಿ ಮುಂತಾದವರ ಪಾತ್ರಗಳು ಕೂಡ ಹೈಲೈಟ್ ಆಗಿವೆ. ಹಿಂದಿ ಪ್ರೇಕ್ಷಕರಿಗೆ ಈ ಸಿನಿಮಾ ತುಂಬ ಇಷ್ಟ ಆಗಿದೆ. ಮೊದಲ ದಿನ ಭರ್ಜರಿ ಓಪನಿಂಗ್ ಪಡೆದುಕೊಂಡ ‘ಜವಾನ್’ ಸಿನಿಮಾ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos