ಜಾರಕಿ ಸಹೋರದರ ಜೊತೆ ಸಿದ್ದು ಕಾರಲ್ಲೇ ಸಭೆ!

ಜಾರಕಿ ಸಹೋರದರ ಜೊತೆ ಸಿದ್ದು ಕಾರಲ್ಲೇ ಸಭೆ!

ಗೋಕಾಕ, ಆ. 29 : ಮಾಜಿ ಸಿಎಂ ಸಿದ್ದರಾ ಮಯ್ಯ ಬುಧವಾರ ಗೋಕಾಕ ನಗರಕ್ಕೆ ಭೇಟಿ ನೆರೆ ಪೀಡಿತ ಪ್ರದೇಶಗಳನ್ನು ವೀಕ್ಷಿಸಿದರು. ಇದೇ ವೇಳೆ ಮಾಜಿ ಸಚಿವ ಸತೀಶ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಅವರನ್ನು ತಮ್ಮ ಕಾರಿನಲ್ಲಿಯೇ ಕೂರಿಸಿಕೊಂಡು ಗೌಪ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ರಮೇಶ ಜಾರಕಿಹೊಳಿ ಅನರ್ಹ ಗೊಂಡ ನಂತರ ಮೊದಲ ಬಾರಿಗೆ ಅವರ ಸೋದರರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಮುಂಬರುವ ಉಪಚುನಾವಣೆಗೆ ಈಗಿನಿಂದಲೇ ತಯಾರಿ ಸಿದ್ಧತೆ ಮಾಡಿಕೊ ಳ್ಳುವಂತೆ ಜಾರಕಿಹೊಳಿ ಸಹೋದರರಿಗೆ ಸೂಚ್ಯವಾಗಿ ಹೇಳಿದ್ದಾರೆನ್ನಲಾಗಿದೆ.
‘ನಮಗೆ ಮನೆ ಇಲ್ಲ ಕಣ್ಣೀರಿಟ್ಟ ವೃದ್ಧೆ : ನೆರೆ ಸಂತ್ರಸ್ತರ ಸಮಸ್ಯೆ ಆಲಿಸಲು ಸಿದ್ದರಾಮಯ್ಯ ಬೋಜಗಾರ ಗಲ್ಲಿಗೆ ಭೇಟಿ ನೀಡಿದ ವೇಳೆ ವೃದ್ಧೆಯೊಬ್ಬಳು ಸಿದ್ದರಾಮಯ್ಯ ನವರಿಗೆ ಕೈ ಮುಗಿದು ‘ನಮಗೆ ಮನೆ ಇಲ್ಲ. ಮನೆ ಕೊಡಿಸಿ’ ಎಂದು ಕಣ್ಣೀರು ಹಾಕಿದ್ದಾಳೆ. ಈ ವೇಳೆ ಸಿದ್ದರಾಮಯ್ಯ ಮನೆ ಕೊಡಿಸುವುದಾಗಿ ಭರವಸೆ ನೀಡಿ ಸಮಾಧಾನಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos