ಜಪಾನ್ ನಲ್ಲಿ ಜನರಿಗಿಂತ ಗೊಂಬೆಗಳು ಹೆಚ್ಚು

ಜಪಾನ್ ನಲ್ಲಿ ಜನರಿಗಿಂತ ಗೊಂಬೆಗಳು ಹೆಚ್ಚು

ಜಪಾನ್,ಜೂ. 27 : ಜಪಾನ್  ಒಂದು ಹಳ್ಳಿಯಲ್ಲಿ ಜನರಿಗಿಂತಲೂ ಹೆಚ್ಚು ಗೊಂಬೆಗಳು ಇವೆಯಂತೆ. ಇದಕ್ಕೆ ಮುಖ್ಯ ಕಾರಣ ಅಲ್ಲಿ ಜನಸಂಖ್ಯೆ ನಿಯಂತ್ರಣ ಮಾಡಿಕೊಳ್ಳಲು ಹೇಳಿರುವುದು. ಮಕ್ಕಳಿಗೆ ಆಟಕ್ಕಾಗಿ ಗೊಂಬೆಗಳನ್ನು ಖರೀದಿಸಿಕೊಡುವುದು ಇದೆ. ಗೊಂಬೆಗಳನ್ನು ಕೆಲವೊಂದು ಕಡೆಗಳಲ್ಲಿ ವಿಶೇಷ ಸಂದರ್ಭದಲ್ಲಿ ಶೃಂಗಾರ ಮಾಡಿ ಪ್ರದರ್ಶನಕ್ಕೆ ಕೂಡ ಇಡುತ್ತಾರೆ. ಇಂತಹ ಹಲವಾರು ಆಚರಣೆಗಳು ಭಾರತದಲ್ಲಿ ಇದೆ. ಈಗ ಮನುಷ್ಯರಿಗಿಂತ ಹೆಚ್ಚು ಗೊಂಬೆಗಳು ಇವೆಯಂತೆ. ಜಪಾನ್ ಪಶ್ಚಿಮ ಭಾಗದಲ್ಲಿ ಆವರಿಸಿರುವಂತಹ ಬೆಟ್ಟಗಳ ಮಧ್ಯೆ ಇರುವಂತಹ ಒಂದು ಸಣ್ಣ ಗ್ರಾಮವೇ ನಗೊರೊ ಎನ್ನುವುದು. ಇಲ್ಲಿ ಬೀದಿಗಳಲ್ಲಿ ಜನರಿಲ್ಲದೆ ಸ್ಮಶಾನದಂತೆ ಕಂಡುಬರುತ್ತದೆ. ಈ ಗ್ರಾಮದ ಜನಸಂಖ್ಯೆಯು ಹಿಂದೆ ಒಂದು ಸಲ 300 ಆಗಿತ್ತು. ಇದರ ಬಳಿಕ ಇದು ಈಗ ಕೇವಲ 27ಕ್ಕೆ ಕುಸಿದಿದೆ. ಇಲ್ಲಿನ ಜನರ ಏಕಾಂಗಿತನ ನಿವಾರಣೆ ಮಾಡಲು ಸುಕಿಮಿ ಅಯಾನೊ ಎಂಬವರು ಬೀದಿಗಳ ಬದಿಯಲ್ಲಿ ಮನುಷ್ಯರ ಗಾತ್ರದ ಗೊಂಬೆಗಳನ್ನು ಇಟ್ಟಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos