3 ಎಕರೆ ಭೂಮಿ ಖರೀದಿಗೆ ಜಪಾನ್ ನಿರ್ಧಾರ

3 ಎಕರೆ ಭೂಮಿ ಖರೀದಿಗೆ ಜಪಾನ್ ನಿರ್ಧಾರ

ಮುಂಬೈ, ಜೂ. 27 : ಜಪಾನ್‌ ಮೂಲದ ಬಹುರಾಷ್ಟ್ರೀಯ ಕಂಪನಿ ಸುಮಿಟಾಮೊ ಕಾರ್ಪೊರೇಷನ್‌, ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 3 ಎಕರೆ ಭೂಮಿಗೆ ಖರೀದಿಗೆ ನಿರ್ಧರಿಸಿದೆ.  2238 ಕೋಟಿ ರೂ. ಬಿಡ್‌ ಮಾಡಿದೆ. ಸೆಂಟ್ರಲ್‌ ಮುಂಬೈನ ಬಾಂದ್ರಾ- ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ  ಸ್ಥಳವಿದೆ. ಮುಂಬೈ ಮೆಟ್ರೋಪಾಲಿಟನ್‌ ಪ್ರಾಂತ್ಯದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕಾರಿ ದಿಲೀಪ್‌ ಕವತ್ಕಾರ್‌ ಅವರು, ‘ಜಮೀನು ಖರೀದಿಗೆ ಜಪಾನ್‌ ಕಂಪನಿ ಬಿಡ್‌ ಸಲ್ಲಿಕೆ ಮಾಡಿದೆ.

ಆದಾಗ್ಯೂ, ಈ ಬಗ್ಗೆ ಪರಿಶೀಲನೆ ಕೈಗೊಂಡು, ಮುಂದಿನ ಪ್ರಕ್ರಿಯೆ ಕೈಗೊಳ್ಳುತ್ತೇವೆ. ಇದಕ್ಕೆ ನಿರ್ದಿಷ್ಟಕಾಲಮಿತಿ ಇರುವುದಿಲ್ಲ’ ಎಂದು ತಿಳಿಸಿದ್ದಾರೆ. ಈ ಪ್ರಕಾರ ಒಂದು ವೇಳೆ ಜಪಾನ್‌ ಕಂಪನಿ ಈ ಜಮೀನನ್ನು ಖರೀದಿಸಿದ್ದೆ ಆದಲ್ಲಿ, ಪ್ರತೀ ಎಕರೆ ಭೂಮಿಗೆ ಕನಿಷ್ಠ 745 ಕೋಟಿ ರೂ. ನೀಡಿ ಖರೀದಿಸಿದಂತಾಗಲಿದೆ.

ಫ್ರೆಶ್ ನ್ಯೂಸ್

Latest Posts

Featured Videos