ಜಂತುಹುಳು ಸೋಂಕಿನಿಂದಾಗಿ ಮಕ್ಕಳನ್ನ ಕಾಪಾಡಿ

ಜಂತುಹುಳು ಸೋಂಕಿನಿಂದಾಗಿ ಮಕ್ಕಳನ್ನ ಕಾಪಾಡಿ

ಕೆ.ಆರ್.ಪುರ, ಸೆ. 26: ಜಂತುಹುಳು ಸೋಂಕಿನಿಂದಾಗಿ ಮಕ್ಕಳು ಹಲವಾರು ಅಪಾಯಕಾರಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಜಂತುಹುಳು ನಾಶಕ ಮಾತ್ರೆಗಳನ್ನು ಕೋಡಿಸಿ ಪೋಷಕರು ಅವರ ಆರೋಗ್ಯ ರಕ್ಷಣೆ ಮಾಡಬೇಕೆಂದು ವೈಧ್ಯಾದಿಕಾರಿ ಡಾ. ಬಾಬು ಮಹೇಂದ್ರ ಪ್ರಸಾದ್ ತಿಳಿಸಿದರು.

ರಾಷ್ಟ್ರೀಯ ಜಂತುಹಿಳು ನಿವಾರಣ ದಿನದ ಅಂಗವಾಗಿ ಜಿಲ್ಲಾ ಆಡಳಿತ, ಜಿಲ್ಲಾ ಪಂ

ಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಕೆ.ಆರ್.ಪುರದ ಚಿಕ್ಕ ದೇವ ಸಂದ್ರ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಎಲ್ಲಾ ವಿಧ್ಯಾರ್ಥಿಗಳಿಗೆ ಜಂತು ಹುಳು ಮಾತ್ರೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಗುವು ದೀರ್ಘಕಾಲದಿಂದ ಜಂತುಹುಳುಗಳನ್ನು ಹೊಂದಿದ್ದರೂ ಸಹಾ ಗೋಚರವಾಗುವ ರೋಗ ಲಕ್ಷಣಗಳನ್ನು ಹೊಂದಿರಲಿಕ್ಕಿಲ್ಲ. ಆದರೆ, ಅದು ಮಗುವಿನ ಆರೋಗ್ಯ, ಶಿಕ್ಷಣ ಹಾಗೂ ಒಟ್ಟಾರೆ ಯೋಗಕ್ಷೇಮದ ಮೇಲೆ ದೀರ್ಘಕಾಲಿಕ ಪರಿಣಾಮವನ್ನು ಬೀರುತ್ತಿರುತ್ತದೆ ಎಂದು ತಿಳಿಸಿದರು.

ಬಸವನಪುರ ವಾರ್ಡ್ ಆರೋಗ್ಯ ನಿರೀಕ್ಷಕ ಗುರುರಾಜ್ ಮಾತನಾಡಿ, ಜಂತುಹುಳು ನಾಶಕ ಮಾತ್ರೆಯು ಮಗುವಿನ ಒಟ್ಟಾರೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ನೆರವಾಗುತ್ತದೆ. ಈ ಮಾತ್ರೆಯನ್ನು ಸರಿಯಾಗಿ ಚೀಪಿ ನುಂಗಬೇಕು ಎಂದರು. ಜಂತುಹುಳು ಮಾತ್ರೆಗಳು ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರ ಹಾಗು ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯಲಿದೆ ಎಂದರು. ಮಕ್ಕಳನ್ನು ಜಂತುಹುಳು ಭಾದಿಸುವುದನ್ನು ತಪ್ಪಿಸಿಕೊಳ್ಳಲು ಶುದ್ಧ ಕುಡಿಯುವ ನೀರು ಲಭ್ಯವಿರುವಂತೆ ನೋಡಿಕೊಳ್ಳುವುದು. ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು, ಉಗುರುಗಳನ್ನು ಸ್ವಚ್ಚ ವಾಗಿಗಿಟ್ಟುಕೊಳ್ಳುವುದು, ಊಟಕ್ಕು ಮೊದಲು, ಶೌಚಾಲಯ ಬಳಸಿದ ನಂತರ ಸಾಬೂನು ನಿಂದ ಕೈಗಳನ್ನು ಸ್ಚಚ್ಚಗೊಳುಸುವುದು, ಬಯಲಿನಲ್ಲಿ ಮಲ ಮೂತ್ರ ವಿಸರ್ಜನೆ ಮಾಡದೆ ಶೌಚಾಲಯವನ್ನು ಬಳಸುವುದು, ಹಣ್ಣು ಮತ್ತು ತರಕಾರಿ ಯನ್ನು ಶುದ್ದ ನೀರಿನಿಂದ ಸ್ವಚ್ಛ ಮಾಡುವುದು, ಸೇರಿದಂತೆ ಇತ

ರೆ ಕ್ರಮಗಳನ್ನು ಪಾಲಿಸುವುದರ ಮೂಲಕ ಜಂತು ಹುಳುಗಳನ್ನು ನಿಯಂತ್ರಿಸ ಬಹುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಉಪಾಧ್ಯಾಯರು ಸುನೀತಾ, ಆರೋಗ್ಯ ನೀರಿಕ್ಷಕ ಶ್ರೀಶೈಲ, ಐ.ಎಫ್.ವಿ ಮಂಜುನಾಥ್ ರೆಡ್ಡಿ, ಹಿರಿಯ ಅರೋಗ್ಯ ಸಹಾಯಕಿ ಈಶ್ವರಿ ಸೇರಿದಂತೆ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos