ಜನಸೇನಾ ಪ್ರಣಾಳಿಕೆ: ವಾರ್ಷಿಕ 10 ಲಕ್ಷ ಉದ್ಯೋಗ ಪವನ್ ಭರವಸೆ

ಜನಸೇನಾ ಪ್ರಣಾಳಿಕೆ: ವಾರ್ಷಿಕ 10 ಲಕ್ಷ ಉದ್ಯೋಗ ಪವನ್ ಭರವಸೆ

ಅಮರಾವತಿ, ಮಾ.15, ನ್ಯೂಸ್ ಎಕ್ಸ್ ಪ್ರೆಸ್ : ಮುಂಬರುವ ಲೋಕಸಭೆ ಚುನಾವಣೆ  ಹಿನ್ನೆಲೆಯ ಕುರಿತು ತೆಲುಗು ಚಿತ್ರರಂಗದ ಜನಪ್ರಿಯ ನಟ ಪವನ್ ಕಲ್ಯಾಣ್ ಅವರು ಜನ ಸೇನಾ ಪಕ್ಷವು, ತನ್ನ ಪ್ರಣಾಳಿಕೆಯನ್ನು ಪ್ರಕಟಿಸಿದೆ. ವಾರ್ಷಿಕವಾಗಿ 10 ಲಕ್ಷ ಉದ್ಯೋಗ ಸೃಷ್ಟಿ, ಎಲ್ಲರಿಗೂ ಉಚಿತ ಆರೋಗ್ಯ ಸೇವೆ ನೀಡುವುದು ಪ್ರಣಾಳಿಕೆಯ ಮುಖ್ಯಾಂಶವಾಗಿದೆ.

ಪವನ್ ಕಲ್ಯಾಣ್ ಅವರು ಈಗಾಗಲೇ 4 ಲೋಕಸಭಾ ಹಾಗೂ 32 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

5ನೇ ವರ್ಷದ ಜನಸೇನಾ ಸಂಸ್ಥಾಪನ ದಿನಾಚರಣೆ ಹಿನ್ನೆಲೆಯಲ್ಲಿ ಮಾ.14ರಂದು ರಾಜಮಂಡ್ರಿಯಲ್ಲಿ ನಡೆದ ಸಾರ್ವನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪವನ್, ಜನಾಸೇನಾ ಪಕ್ಷವನ್ನು ಅಧಿಕಾರಕ್ಕೆ ತಂದರೆ, ರೈತರಿಗೆ ಕೃಷಿಯಲ್ಲಿ ಬಂಡಾವಳ ಹೂಡಲು ವರ್ಷಕ್ಕೆ 8 ಸಾವಿರ ರೂ. ಹಾಗೂ 60 ವರ್ಷ ಮೇಲ್ಪಟ್ಟ ರೈತರಿಗೆ 5 ಸಾವಿರ ರೂ. ಪಿಂಚಣಿಯನ್ನು ನೀಡುತ್ತೇವೆ. ರೈತರಿಗೆ ಉಚಿತವಾಗಿ ಸೋಲಾರ್ ಯಂತ್ರವನ್ನು ಕೊಡುತ್ತೇವೆ ಎಂದರು.

ಆಂಧ್ರಪ್ರದೇಶದೆಲ್ಲೆಡೆ ಪವನ್ ಅವರು ಚುನಾವಣಾ ಪ್ರಚಾರ ಆರಂಭಿಸಿದ್ದು, ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುವುದಾಗಿ ಹೇಳಿದ್ದಾರೆ. ಕಿಂಡರ್ಗಾರ್ಡನ್ ನಿಂದ ಉನ್ನತ ಶಿಕ್ಷಣದವರೆಗೆ ಉಚಿತ ಶಿಕ್ಷಣ, ಅಧಿಕಾರಕ್ಕೆ ಬಂದ 6 ತಿಂಗಳೊಳಗೆ 1 ಲಕ್ಷ ಹಾಗೂ ಒಟ್ಟಾರೆ 10 ಲಕ್ಷ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದರು. ಪ್ರತಿ ಕುಟುಂಬಕ್ಕೆ 10 ಲಕ್ಷ ವಿಮಾ ಸೌಭ್ಯ, ಶುದ್ಧ ಕುಡಿಯುವ ನೀರು, ಹಿಂದುಳಿದ ವರ್ಗಗಳಿಗೆ ಶೇ 5ರಷ್ಟು ಮೀಸಲಾತಿ, ಮೀನುಗಾರರಿಗೆ ವಿಶೇಷ ಬ್ಯಾಂಕ್, ಮಹಿಳೆಯರಿಗೆ ಶಾಸಕಾಂಗದಲ್ಲಿ ಶೇ 33ರಷ್ಟು ಮೀಸಲಾತಿ, ಮುಸ್ಲಿಂ ಸಮುದಾಯದವರ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡುವುದಾಗಿ ಘೋಷಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos