ಯು.ಪಿ ವಿರುದ್ದ ಜೈಪುರ ಗೆ ಭಾರೀ ಅಂತರದ ಗೆಲುವು

ಯು.ಪಿ ವಿರುದ್ದ ಜೈಪುರ ಗೆ ಭಾರೀ ಅಂತರದ ಗೆಲುವು

ಬೆಂಗಳೂರು: ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರೋಕಬ್ಬಡ್ಡಿ ಸೀಸನ್ 10ರ ನಿನ್ನೆ  ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಯು.ಪಿ ಯೋಧಾಸ್ ಮುಖಾಮುಖಿಯಾಗಿತ್ತು.

ಭರ್ಜರಿ ಪ್ರದರ್ಶನವನ್ನು ನೀಡಿದ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್, ಯು.ಪಿ ಯೋಧಾಸ್ ತಂಡವನ್ನು ಮಣಿಸಿತು. ಈ ಮೂಲಕ ಪ್ಯಾಂಥರ್ಸ್ ಪಾಯಿಂಟ್ ಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದಿರುವ ಜೈಪುರ, ಯುಪಿ ತಂಡವನ್ನು 67-30 ಅಂಕಗಳಿಂದ ಸೋಲಿಸಿ ಅಗ್ರ-2ರಲ್ಲಿ ಉಳಿಯುವ ಮೂಲಕ ಸೆಮಿಫೈನಲ್ ಆಡುವುದನ್ನು ಖಚಿತಪಡಿಸಿತು.

20 ಪಂದ್ಯಗಳಲ್ಲಿ ತನ್ನ 14 ನೇ ಗೆಲುವು ಸಾಧಿಸಿದ ಜೈಪುರ ಪರವಾಗಿ, ಅರ್ಜುನ್ ದೇಸ್ವಾಲ್ ಅದ್ಭುತವಾಗಿ ಪ್ರದರ್ಶನ ನೀಡಿದರು. ಇವರು 20 ಅಂಕಗಳನ್ನು ಪಡೆದು ಅಬ್ಬರಿಸಿದರು. ಸುನಿಲ್ ಮತ್ತು ಅಂಕುಶ್ ಹೈ-5 ಪೂರ್ಣಗೊಳಿಸಿದರು. ಅದೇ ರೀತಿ 20 ಪಂದ್ಯಗಳಲ್ಲಿ 15ನೇ ಸೋಲು ಅನುಭವಿಸಿದ ಯುಪಿ ಪರ ಗಗನ್ ಗೌಡ 10 ಅಂಕ ಪಡೆದರು. ಈ ಋತುವಿನಲ್ಲಿ ಜೈಪುರದ ಅತಿ ದೊಡ್ಡ ಗೆಲುವು ಇದಾಗಿದೆ.

ಎರಡೂವರೆ ನಿಮಿಷದಲ್ಲಿ ಜೈಪುರ 2-1 ಮುನ್ನಡೆ ಸಾಧಿಸಿತ್ತು. ಆದರೆ ಮಹಿಪಾಲ್ ಎರಡು ಪಾಯಿಂಟ್ ರೈಡ್‌ನೊಂದಿಗೆ ಯುಪಿಯನ್ನು 3-2 ರಿಂದ ಮುನ್ನಡೆಸಿದರು. ನಂತರ ಯುಪಿ ಡಿಫೆನ್ಸ್ ಅಜಿತ್‌ರನ್ನು ಡೂ ಆರ್ ಡೈ ರೈಡ್‌ನಲ್ಲಿ ಕಟ್ಟಿ ಹಾಕಿ ಜೈಪುರವನ್ನು ಸೂಪರ್ ಟ್ಯಾಕಲ್ ಪರಿಸ್ಥಿತಿಗೆ ಒಳಪಡಿಸಿತು. ಇಲ್ಲಿಂದ ಸ್ಥಿರ ಆಟದ ಪ್ರದರ್ಶನ ನೀಡಿದ ಜೈಪುರ್ ಅಂಕಗಳನ್ನು ಕಲೆ ಹಾಕುವತ್ತ ಚಿತ್ತ ನೆಟ್ಟಿತು. ಪರಿಣಾಮ ಅರ್ಜುನ್ ಬಂದ ತಕ್ಷಣ ಬೋನಸ್ ಪಡೆದು ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿದರು.

ನಂತರ ಜೈಪುರದ ರಕ್ಷಣಾ ವಿಭಾಗದವರು ಗಗನ್ ಅವರಿಗೆ ಖೆಡ್ಡಾ ತೋಡಿದರು. ಈ ವೇಳೆ ಸ್ಕೋರ್ 7-7 ರಲ್ಲಿ ಸಮಬಲದಲ್ಲಿ ಸಾಗುತ್ತಿತ್ತು. ಮಹಿಪಾಲ್ ಮಾಡು ಇಲ್ಲವೇ ಮಡಿ ರೈಡ್‌ನಲ್ಲಿ ಖಾಲಿ ಕೈಯಲ್ಲಿ ಮರಳಿದರು. ಇಲ್ಲಿಂದ ಜೈಪುರ್ ಪಂದ್ಯದ ಮೇಲೆ ಕ್ರಮೇಣ ಹಿಡಿತ ಸಾಧಿಸಲು ಪ್ರಾರಂಭಿಸಿತು.

 

ಫ್ರೆಶ್ ನ್ಯೂಸ್

Latest Posts

Featured Videos