ಇಂದು ಜೈ ಜಗದೀಶ್ ರವರ ಹುಟ್ಟು ಹಬ್ಬ

ಇಂದು ಜೈ ಜಗದೀಶ್ ರವರ ಹುಟ್ಟು ಹಬ್ಬ

ಬೆಂಗಳೂರು, ಜೂ. 29 : ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಮತ್ತು ನಿರ್ಮಾಪಕ ಜೈ ಜಗದೀಶ್ ಗೆ ಇಂದು (ಜೂ.29) ಹುಟ್ಟುಹಬ್ಬದ ಸಂಭ್ರಮ. ನಾಯಕ ನಟನಾಗಿ ಚಲನಚಿತ್ರದ ಮೂಲಕ ಅಭಿನಯವನ್ನು ಆರಂಭಿಸಿದ ಜೈ ಜಗದೀಶ್ ಅವರು ಚಂದನವನ ಕಂಡ ಪ್ರತಿಭಾವಂತ ನಟರಲ್ಲಿ ಒಬ್ಬರು. ಜೂನ್ 29, 1954 (ವಯಸ್ಸು 64)ರಂದು ಜನಿಸಿದ ಜೈ ಜಗದೀಶ್ ಅವರು ಇದುವರೆಗೂ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1998 ರಲ್ಲಿ ‘ಭೂಮಿ ತಾಯಿಯ ಚೊಚ್ಚಲ ಮಗ’ ಚಿತ್ರದ ಮೂಲಕ ನಿರ್ಮಾಪಕನಾಗಿ ಗುರುತಿಸಿಕೊಂಡ ಜೈ ಜಗದೀಶ್ ಅವರು, ‘ಮದನ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ.
ನಟಿ, ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಜೈ ಜಗದೀಶ್ ಅವರ ಪತ್ನಿ. ಇವರ ಮೂವರು ಹೆಣ್ಣುಮಕ್ಕಳಾದ ವೈಭವಿ, ವೈನಿಧಿ ಮತ್ತು ವೈಸಿರಿ ಇದೀಗ ‘ಯಾನ’ ಎಂಬ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಈ ಚಿತ್ರವನ್ನು ವಿಜಯಲಕ್ಷ್ಮಿ ಸಿಂಗ್ ನಿರ್ದೇಶಿಸುತ್ತಿರುವುದು ವಿಶೇಷ.
ಜೈ ಜಗದೀಶ್ ಅವರು ನಟಿಸಿದ ಬಂಧನ, ಗಾಳಿಮಾತು, ತಾಯಿಕನಸು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅವರು ‘ಭೂಮಿ ತಾಯಿಯ ಚೊಚ್ಚಲ ಮಗ’ ಮಾತ್ರವಲ್ಲದೆ, ಓ ಪ್ರೇಮವೆ (1999), ಕೋತಿಗಳು ಸಾರ್ ಕೋತಿಗಳು(2001), ಕಾಂಚನಗಂಗಾ ( 2005),ಈ ಬಂಧನ (2007),ವಾರೆ ವಾಹ್ (2010) ಚಿತ್ರಗಳನ್ನು ನಿರ್ಮಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos