ನಟಿ ವಿಜಯ ನಿರ್ಮಲಾ ವಿಧಿವಶ

ನಟಿ ವಿಜಯ ನಿರ್ಮಲಾ ವಿಧಿವಶ

ಹೈದರಾಬಾದ್, ಜೂ. 27: ಜಗತ್ತಿನಲ್ಲೇ ಅತ್ಯಧಿಕ ಚಿತ್ರಗಳನ್ನು ನಿರ್ದೇಶಿಸಿರುವ ಮೊದಲ ಮಹಿಳೆಯಾಗಿ 2002ರಲ್ಲಿ ಗಿನ್ನಿಸ್ ಬುಕ್ ನಲ್ಲಿ ಸ್ಥಾನ  ಪಡೆದಿರು ಟಾಲಿವುಡ್ ಖ್ಯಾತ ನಟಿ, ನಿರ್ದೇಶಕಿ, ಸೂಪರ್ ಸ್ಟಾರ್ ಕೃಷ್ಣ ಅವರ ಪತ್ನಿ ಹಾಗೂ ನಟ ಮಹೇಶ್ ಬಾಬು ಅವರ ಮಲತಾಯಿ ವಿಜಯ ನಿರ್ಮಲಾ (73) ವಿಧಿವಶರಾಗಿದ್ದಾರೆ.

ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದ ವಿಜಯಾ ನಿರ್ಮಲ, 44 ತೆಲುಗು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹೀಗಾಗಿ ಅತಿ ಹೆಚ್ಚು ಚಿತ್ರ ನಿರ್ದೇಶಿಸಿದ್ದ ಮಹಿಳಾ ನಿರ್ದೇಶಕಿ ಎಂಬ ಕಾರಣಕ್ಕೆ 2002 ರಲ್ಲಿ ಇವರ ಹೆಸರನ್ನು ಗಿನ್ನಿಸ್ ದಾಖಲೆಗೆ ಸೇರ್ಪಡೆ ಮಾಡಲಾಗಿತ್ತು.

ಹೈದರಾಬಾದಿನ ಗಚ್ಚಿಬೌಲಿಯಲ್ಲಿನ ಕಾಂಟಿನೆಂಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ಕಾಲದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos