ಐವರು ಡಿಸಿಎಂ ಆಯ್ಕೆಗೆ ಜಗನ್ ರೆಡಿ!

ಐವರು ಡಿಸಿಎಂ ಆಯ್ಕೆಗೆ ಜಗನ್  ರೆಡಿ!

ಅಮರಾವತಿ: ಜೂ. ಜೂನ್. 7, ನ್ಯೂಸ್ ಎಕ್ಸ್ ಪ್ರೆಸ್ : ಚಂದ್ರಬಾಬು ನಾಯ್ಡು ಸಿಎಂ ಆಗಿದ್ದಾಗ ಇಬ್ಬರು ಉಪ ಮುಖ್ಯಮಂತ್ರಿಗಳು ಕಾರ್ಯ ನಿರ್ವಹಿಸಿದ್ದರು. ಜಗನ್ ಮೋಹನ್ ನೇತೃತ್ವದಲ್ಲಿ  ಐವರು ಉಪಮುಖ್ಯಮಂತ್ರಿಗಳು ನೇಮಕಗೊಂಡರೆ ರಾಷ್ಟ್ರದ ಇತಿಹಾಸದಲ್ಲೇ ಮೊದಲು ಎಂದೆನಿಸಿಕೊಳ್ಳಲಿದೆ. ಆಂಧ್ರ ಪ್ರದೇಶದಲ್ಲಿ ಅಧಿಕಾರ ಸ್ಥಾಪಿಸಿದ ವೈಎಸ್‌ಆರ್‌ ಕಾಂಗ್ರೆಸ್‌ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಐವರು ಉಪ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲು ಮುಂದಾಗಿದ್ದಾರೆ.  ರಾಜ್ಯವೊಂದಕ್ಕೆ ಐವರು ಉಪ ಮುಖ್ಯಮಂತ್ರಿಗಳು ನೇಮಕವಾಗಲಿದ್ದಾರೆ.

ಎಲ್ಲಾ ಸಮುದಾಯವನ್ನು ಸಮಾನವಾಗಿ ಕೊಂಡೊಯ್ಯುವ ಚಿಂತನೆ ನಡೆಸಿರುವ ಜಗನ್‌ಮೋಹನ್‌ ಎಸ್‌ಸಿ, ಎಸ್‌ಟಿ, ಬಿಸಿ, ಅಲ್ಪಸಂಖ್ಯಾತ ಮತ್ತು ಕಾಪು ಸಮುದಾಯಗಳಿಂದ ತಲಾ ಓರ್ವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲು ಮುಂದಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos