ಜಾಕಿ ಸಿನಿಮಾ ರೀ ರಿಲೀಸ್‌ ಅಭಿಮಾನಿಗಳ ಸಂಭ್ರಮ

ಜಾಕಿ ಸಿನಿಮಾ ರೀ ರಿಲೀಸ್‌ ಅಭಿಮಾನಿಗಳ ಸಂಭ್ರಮ

ಬೆಂಗಳೂರು: ಪುನೀತ್ ರಾಜ್​ಕುಮಾರ್ ನಟನೆಯ, ಸೂರಿ ನಿರ್ದೇಶನದ ‘ಜಾಕಿ’ ಸಿನಿಮಾ ರಿರೀಲಿಸ್ ಆಗಿದೆ. ಮಾರ್ಚ್ 17 ಪುನೀತ್ ಬರ್ತ್​ಡೇ. ಈ ಹಿನ್ನೆಲೆಯಲ್ಲಿ ಸಿನಿಮಾನ ಇಂದು ಮತ್ತೆ ಬಿಡುಗಡೆ ಮಾಡಲಾಗಿದೆ. ಫ್ಯಾನ್ಸ್ ಅದ್ದೂರಿಯಾಗಿ ಈ ಚಿತ್ರವನ್ನು ಸ್ವಾಗತಿಸಿದ್ದಾರೆ. ಬೆಂಗಳೂರಿನ ಪ್ರಸನ್ನ ಥಿಯೇಟರ್​ನಲ್ಲಿ ಜಾಕಿ ರಿ-ರೀಲಿಸ್ ಆಗಿದೆ. ಪಟಾಕಿ ಹಚ್ಚಿ, ಕೇಕ್ ಕತ್ತರಿಸಿ ಪ್ಯಾನ್ಸ್ ಸಂಭ್ರಮಿಸಿದ್ದಾರೆ. ಮುಂಜಾನೆಯೇ ಅಭಿಮಾನಿಗಳಿಗಾಗಿ ವಿಶೇಷ ಆಯೋಜನೆ ಮಾಡಲಾಗಿತ್ತು. ‘ಜಾಕಿ’ 14 ವರ್ಷದ ಹಿಂದೆ ತೆರೆಕಂಡಿದ್ದ ಚಿತ್ರವಾಗಿದೆ.

ದಿವಂಗತ ಪುನೀತ್ ರಾಜ್​ಕುಮಾರ್ ನಟನೆಯ ‘ಜಾಕಿ’ ಸಿನಿಮಾ ಇಂದು ಮರು ಬಿಡುಗಡೆ ಆಗಿದೆ. ಅಪ್ಪು ಅಭಿಮಾನಿಗಳು ಸಂಭ್ರಮದಿಂದ ‘ಜಾಕಿ’ ಸಿನಿಮಾವನ್ನು ಮತ್ತೊಮ್ಮೆ ಬರಮಾಡಿಕೊಂಡಿದ್ದಾರೆ. 14 ವರ್ಷದ ಹಿಂದೆ ಬಿಡುಗಡೆ ಆಗಿದ್ದ ‘ಜಾಕಿ’ ಸಿನಿಮಾವನ್ನು ಅಭಿಮಾನಿಗಳು ಮತ್ತೊಮ್ಮೆ ನೋಡಿ ಖುಷಿ ಪಡುತ್ತಿದ್ದಾರೆ. ಅಗಲಿದ ತಮ್ಮ ಮೆಚ್ಚಿನ ನಾಯಕ ನಟನನ್ನು ತೆರೆಯ ಮೇಲೆ ಮತ್ತೊಮ್ಮೆ ಕಣ್ಣು ತುಂಬಿಕೊಳ್ಳುತ್ತಿದ್ದಾರೆ. ಸಿನಿಮಾ ಮರು ಬಿಡುಗಡೆ ಆಗಿರುವ ಖುಷಿಯ ಜೊತೆಗೆ ಅಪ್ಪು ಇನ್ನಿಲ್ಲ ಎಂಬ ನೋವನ್ನೂ ಅನುಭವಿಸುತ್ತಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos