ಕ್ಷಮಿಸಿ… ಇವು ಖಂಡಿತ ಸಸ್ಯಾಹಾರಗಳಲ್ಲ..!

ಕ್ಷಮಿಸಿ… ಇವು ಖಂಡಿತ ಸಸ್ಯಾಹಾರಗಳಲ್ಲ..!

ಬೆಂಗಳೂರು, ಏ. 8, ನ್ಯೂಸ್ ಎಕ್ಸ್ ಪ್ರೆಸ್: ಕೆಲವರು ಮಾಂಸಹಾರವನ್ನು ತ್ಯಜಿಸಿರುತ್ತಾರೆ. ಆದರೆ ಅವರು ಸಸ್ಯಾಹಾರ ಎಂದು ಸೇವಿಸುವ ಕೆಲವು ವಸ್ತುಗಳು ಮಾಂಸಹಾರದಿಂದ ತಯಾರಿಸಲಾಗಿದೆಯಂತೆ. ಅವು ಯಾವುದು ಎಂಬುದನ್ನು ತಿಳಿದುಕೊಳ್ಳಿ.
1) ಅಡುಗೆ ಎಣ್ಣೆ: ಯಾವ ಎಣ್ಣೆಯಲ್ಲಿ ಒಮೇಗಾ 3 ಫ್ಯಾಟಿ ಆ್ಯಸಿಡ್ ಇವೆ ಅಥವಾ ವಿಟಮಿನ್ ಡಿ ಇದೆ ಎಂದು ಕಂಪನಿಗಳು ಹೇಳುತ್ತವೆ. ಆದರೆ ಆ ಎಣ್ಣೆ ಪೂರ್ತಿಯಾಗಿ ಸಸ್ಯಾಹಾರವಾಗಿಲ್ಲ. ಈ ಎಣ್ಣೆಯಲ್ಲಿ ಕುರಿಯಲ್ಲಿ ಸಿಗುವ ಲೆನೊಲಿನ್ ಎಂಬ ಅಂಶವಿರುತ್ತದೆ. 2) ರಿಫೈನ್ಡ್ ಸಕ್ಕರೆ: ನೀವು ರಿಫೈನ್ಡ್ ಸಕ್ಕರೆ ಶುಚಿ ಮಾಡಲು ನ್ಯಾಚುರಲ್ ಕಾರ್ಬನ್ ಬಳಸುತ್ತಾರೆ. ಇದನ್ನು ಜಾನುವಾರಿನ ಮೂಳೆಯಿಂದ ತಯಾರಿಸಲಾಗುತ್ತದೆ. 3) ಜಾಮ್ ಮತ್ತು ಜೆಲ್ಲಿ: ಜಾಮ್ ಮತ್ತು ಜೆಲ್ಲಿ ತಯಾರಿಸಲು ಮಾಂಸಾಹಾರವಾದ ಜಿಲೆಟಿನ್ ಬಳಸಲಾಗುತ್ತದೆ. 4) ಸೂಪ್: ರೆಸ್ಟೋರೆಂಟ್‌ನಲ್ಲಿ ಸೇವಿಸುವ ವೆಜ್ ಸೂಪಿನಲ್ಲಿ ಮಾಂಸಾಹಾರವಿರುತ್ತದೆ. ಪೂರ್ತಿಯಾಗಿ ಅಲ್ಲದೇ ಹೋದರೂ, ಅದರ ಕೆಲವು ಉತ್ಪನ್ನಗಳನ್ನು ಬಳಸುತ್ತಾರೆ. 5) ಬಿಯರ್, ವೈನ್: ಈ ಶರಾಬು ಶುದ್ಧೀಕರಿಸಲು ಇಂಜಿನ್ಗ್ಲಾಸ್ ಬಳಸುತ್ತಾರೆ. ಇದನ್ನು ಮೀನಿನ ಬ್ಲೆಡರ್‌ನಿಂದ ತಯಾರಿಸುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos